alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಲೆ ಇಳಿಕೆಯ ಖುಷಿಯಲ್ಲಿರುವಾಗಲೇ ಮತ್ತೆ ಶಾಕ್ ನೀಡಿದ ಚಿನ್ನ

ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. 220 ರೂಪಾಯಿ ಹೆಚ್ಚಳವಾಗಿದ್ದು 10 ಗ್ರಾಂ ಬಂಗಾರದ ಬೆಲೆ ಈಗ 31,170 ರೂಪಾಯಿಗೆ ತಲುಪಿದೆ. ಮದುವೆಯ ಸೀಸನ್ ಆಗಿರೋದ್ರಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಿದೆ. ಹಾಗಾಗಿ ಆಭರಣ ವ್ಯಾಪಾರಿಗಳು ಖರೀದಿಗೆ ಮುಗಿಬಿದ್ದಿರೋದ್ರಿಂದ ಬಂಗಾರ ಮತ್ತೆ ದುಬಾರಿಯಾಗಿದೆ.

ಬೆಳ್ಳಿ ದರ ಕೂಡ ಗಗನಮುಖಿಯಾಗಿದೆ. 300 ರೂಪಾಯಿ ಏರಿಕೆಯೊಂದಿಗೆ ಒಂದು ಕೆಜಿ ಬೆಳ್ಳಿ ಬೆಲೆ 39,230 ರೂಪಾಯಿ ಆಗಿದೆ. ವಿದೇಶಗಳಲ್ಲೂ ಬಂಗಾರಕ್ಕೆ ಬೇಡಿಕೆ ಹೆಚ್ಚಾಗಿರೋದ್ರಿಂದ ಬೆಲೆ ಏರಿಕೆಯಾಗಿದೆ ಅಂತಾ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸವರನ್ ಚಿನ್ನದ ಬೆಲೆ 8 ಗ್ರಾಂಗೆ ಸದ್ಯ 24,800 ರೂಪಾಯಿ ಇದೆ. ಆದ್ರೆ ಬೆಳ್ಳಿ ನಾಣ್ಯಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಏರಿಕೆಯ ಹಾದಿಯಲ್ಲಿದ್ದ ಚಿನ್ನದ ಬೆಲೆ ಗುರುವಾರವಷ್ಟೇ 600 ರೂ. ಇಳಿಕೆಯಾಗಿದ್ದು, ಖರೀದಿದಾರರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಇಂದು ಮತ್ತೆ ಏರಿಕೆ ಆಗುವುದರೊಂದಿಗೆ ಗ್ರಾಹಕರಿಗೆ ಶಾಕ್ ನೀಡಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...