alex Certify
ಕನ್ನಡ ದುನಿಯಾ       Mobile App
       

Kannada Duniya

ನಾಳೆಯಿಂದ ಶುರುವಾಗಲಿದೆ ಚಿನ್ನದ ಬಾಂಡ್ ಯೋಜನೆ

ನವದೆಹಲಿ: ಕೇಂದ್ರ ಸರ್ಕಾರ 2015 ರಲ್ಲಿ ಆರಂಭಿಸಿದ್ದ ಚಿನ್ನದ ಬಾಂಡ್ ಯೋಜನೆಯ ಪ್ರಸಕ್ತ ಸಾಲಿನ ಮೊದಲ ಕಂತು ಏಪ್ರಿಲ್ 16 ರಿಂದ ಆರಂಭವಾಗಲಿದೆ.

ಏಪ್ರಿಲ್ 16 ರಿಂದ 20 ರ ವರೆಗೆ ಚಿನ್ನದ ಬಾಂಡ್ ಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಮೇ 4 ರಂದು ಬಾಂಡ್ ವಿತರಿಸಲಾಗುವುದು. ಬ್ಯಾಂಕ್ ಗಳು, ಪೋಸ್ಟ್ ಆಫೀಸ್ ಮೊದಲಾದ ಕಡೆಗಳಲ್ಲಿ ಚಿನ್ನದ ಬಾಂಡ್ ವಿತರಿಸಲಾಗುತ್ತದೆ.

ಭಾರತೀಯ ಚಿನ್ನ ಮತ್ತು ಆಭರಣ ಒಕ್ಕೂಟ 999 ಶುದ್ಧತೆಯ ಚಿನ್ನಕ್ಕೆ 1 ವಾರಕ್ಕೆ ನಿಗದಿಪಡಿಸುವ ಬೆಲೆ ಆಧರಿಸಿ, ಚಿನ್ನದ ಬಾಂಡ್ ಬೆಲೆಯನ್ನು ನಿಗದಿ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕನಿಷ್ಠ 1 ಗ್ರಾಂ ನಿಂದ ಗರಿಷ್ಠ 4 ಕೆ.ಜಿ. ವರೆಗೆ ಚಿನ್ನದ ಬಾಂಡ್ ನಲ್ಲಿ ಹೂಡಿಕೆ ಮಾಡಬಹುದು. ಟ್ರಸ್ಟ್ ಗಳಿಗೆ 20 ಕೆ.ಜಿ. ವರೆಗೆ ಹೂಡಿಕೆಗೆ ಅವಕಾಶವಿದೆ. ಶೇ. 2.50 ಬಡ್ಡಿ ದರ ಇದ್ದು, ಬಾಂಡ್ ಅವಧಿ 8 ವರ್ಷವಾಗಿದೆ. 20,000 ರೂ.ವರೆಗೆ ನಗದು ರೂಪದಲ್ಲಿ ಬಾಂಡ್ ಮೌಲ್ಯ ಪಾವತಿಯನ್ನು ಪಡೆಯಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...