alex Certify
ಕನ್ನಡ ದುನಿಯಾ       Mobile App
       

Kannada Duniya

ಸೆ.1 ರಿಂದ ಚಿನ್ನದ ಬಾಂಡ್ ಅರ್ಜಿ ಸ್ವೀಕಾರ

gold bond

ನವದೆಹಲಿ: ಸೆಪ್ಟಂಬರ್ 1 ರಿಂದ 9 ರವರೆಗೆ, 5 ನೇ ಕಂತಿನ ಚಿನ್ನದ ಬಾಂಡ್ ಹೂಡಿಕೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟಂಬರ್ 9 ರವರೆಗೆ ಅರ್ಜಿ ಸ್ವೀಕರಿಸಿ, 23 ರಂದು ಬಾಂಡ್ ಗಳನ್ನು ವಿತರಿಸಲಾಗುವುದು.

ಚಿನ್ನವನ್ನು ಬಾಂಡ್ ರೂಪದಲ್ಲಿ ಹೂಡಿಕೆ ಮಾಡುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. 5 ನೇ ಕಂತಿನ ಯೋಜನೆ ಸೆಪ್ಟಂಬರ್ 1 ರಿಂದ ಆರಂಭವಾಗಲಿದೆ. ಚಿನ್ನವನ್ನು ತಮ್ಮಲ್ಲಿ ಇಟ್ಟುಕೊಳ್ಳುವ ಬದಲಿಗೆ, ಬಾಂಡ್ ರೂಪದಲ್ಲಿ ಚಿನ್ನ ಖರೀದಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಚಿನ್ನದ ಬಾಂಡ್ ಯೋಜನೆ ಪರಿಚಯಿಸಲಾಗಿದೆ. ವ್ಯಕ್ತಿಯೊಬ್ಬ 1 ವರ್ಷಕ್ಕೆ 500 ಗ್ರಾಂ ವರೆಗೆ ಗರಿಷ್ಠ ಹೂಡಿಕೆ ಮಾಡಬಹುದಾಗಿದೆ.

ಆಯ್ದ ಪೋಸ್ಟ್ ಆಫೀಸ್, ಬ್ಯಾಂಕ್ ಗಳು, ಷೇರುಪೇಟೆ ಮೊದಲಾದ ನಿಗದಿತ ಕಡೆಗಳಲ್ಲಿ ಚಿನ್ನದ ಬಾಂಡ್ ಗಳನ್ನು ಮಾರಾಟ ಮಾಡಲಾಗುವುದು. ಕನಿಷ್ಠ ಹೂಡಿಕೆಯನ್ನು 1 ಗ್ರಾಂ ವರೆಗೆ ಇಳಿಸಿದ್ದು, ಗರಿಷ್ಠ 500 ಗ್ರಾಂ ನಿಗದಿಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...