alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಲೆ ಏರಿಕೆ ನಡುವೆಯೂ ಖರೀದಿಯಾದ ಚಿನ್ನವೆಷ್ಟು ಗೊತ್ತಾ?

ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದ್ರೆ ಒಳ್ಳೆದಾಗುತ್ತೆ ಎಂಬ ನಂಬಿಕೆಯಿಂದ ಚಿನ್ನ ಖರೀದಿಗೆ ಜನ ಮುಗಿ ಬೀಳುತ್ತಾರೆ. ಈ ಸಲದ ಅಕ್ಷಯ ತೃತೀಯದ ದಿನದಂದು ಚಿನ್ನಾಭರಣ ವರ್ತಕರು ಭರ್ಜರಿ ವಹಿವಾಟು ನಡೆಸಿದ್ದಾರೆ.

ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದರೂ ಜನರ ಖರೀದಿ ಉತ್ಸಾಹಕ್ಕೆ ಭಂಗ ಬಂದಿಲ್ಲ. ರಾಜ್ಯದಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಸುಮಾರು 3495 ಕೆ.ಜಿ. ಚಿನ್ನ, 2325 ಕೆ.ಜಿ. ಬೆಳ್ಳಿ ಮಾರಾಟವಾಗಿದ್ದು, ಸುಮಾರು 1100 ಕೋಟಿ ರೂ. ವಹಿವಾಟು ನಡೆಸಲಾಗಿದೆ.

ಚಿನ್ನದ ದರ ಪ್ರತಿ ಗ್ರಾಂಗೆ 250 ರೂ. ವರೆಗೂ ಏರಿಕೆಯಾಗಿ ಬೆಲೆ ಗಗನಕ್ಕೇರಿದ್ದರೂ, ಕೊಳ್ಳುಬಾಕ ಸಂಸ್ಕೃತಿ ಕಾರಣ ಜನ ಮುಗಿಬಿದ್ದು ಚಿನ್ನ ಖರೀದಿಸಿದ್ದಾರೆ. ಕೆಲವು ಚಿನ್ನಾಭರಣ ಅಂಗಡಿಗಳಲ್ಲಿ ಬೆಳಿಗ್ಗೆ 6 ಗಂಟೆಗೆ ವ್ಯಾಪಾರ ಆರಂಭವಾಗಿ ತಡರಾತ್ರಿವರೆಗೂ ವಹಿವಾಟು ನಡೆಸಲಾಗಿದೆ.

ಮುಂಬೈನಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ 135 ರೂ. ಏರಿಕೆಯಾಗಿದ್ದು, ಆಭರಣ ಚಿನ್ನ 31,290 ರೂ., ಅಪರಂಜಿ ಚಿನ್ನ 31,440 ರೂ. ತಲುಪಿದೆ. ಬೆಳ್ಳಿ ಕೆ.ಜಿ.ಗೆ 620 ರೂ. ಏರಿಕೆಯಾಗಿ 39,565 ರೂ. ತಲುಪಿದೆ. ಗ್ರಾಹಕರು ಖರೀದಿಗೆ ಉತ್ಸಾಹ ತೋರಿದ್ದರಿಂದ ಭಾರೀ ಪ್ರಮಾಣದಲ್ಲಿ ಚಿನ್ನ ಮಾರಾಟವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...