alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದ ಅತಿ ಸಿರಿವಂತ ಮಹಿಳೆಯ ಆಸ್ತಿ ಎಷ್ಟು ಗೊತ್ತಾ?

ಕೋಟಕ್ ಮಹೇಂದ್ರ ಬ್ಯಾಂಕ್ ನ ಅಂಗ ಸಂಸ್ಥೆ ಕೋಟಕ್ ವೆಲ್ತ್ ಮ್ಯಾನೇಜ್ ಮೆಂಟ್ ಪ್ರಕಟಿಸಿರುವ ಭಾರತದ ಅತಿ ಶ್ರೀಮಂತ ಮಹಿಳೆ ಅನ್ನೋ ಗರಿಮೆಗೆ ಸ್ಮಿತಾ ವಿ. ಕೃಷ್ಣ ಪಾತ್ರರಾಗಿದ್ದಾರೆ. 37, 570 ಕೋಟಿ ರೂಪಾಯಿ ಆಸ್ತಿ ಸಂಪಾದನೆಯ ಮೂಲಕ ಗೋದ್ರೇಜ್ ಗ್ರೂಪ್ ನ ಒಡತಿ 2018ರ ಭಾರತದ ಸಿರಿವಂತ ಮಹಿಳೆಯರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. 2014ರಲ್ಲಿ ಭಾರತದ ಖ್ಯಾತ ಭೌತಶಾಸ್ತ್ರಜ್ಞ ಹೋಮಿ ಜೆ ಬಾಬಾ ಅವರ ಬಂಗಲೆಯನ್ನ 372 ಕೋಟಿ ರೂಪಾಯಿ ಕೊಟ್ಟು ಕೊಳ್ಳುವ ಮೂಲಕ ಸ್ಮಿತಾ ವಿ. ಕೃಷ್ಣನ್ ದೇಶದಲ್ಲಿ ಖ್ಯಾತರಾಗಿದ್ದರು.

ಎಚ್.ಸಿ.ಎಲ್. ನ ರೋಷಿನಿ ನಡಾರ್, ಬೆನೆಟ್ ಅಂಡ್ ಕೋಲ್ ಮನ್ ಸಂಸ್ಥೆಯ ಇಂದು ಜೈನ್, ಬಯೋಕಾನ್ ನ ಕಿರಣ್ ಮಜುಮ್ದಾರ್ ಷಾ ಅವರನ್ನ ಹಿಂದಿಕ್ಕಿ ಸ್ಮಿತಾ ವಿ. ಕೃಷ್ಣ ಭಾರತದ ಶ್ರೀಮಂತ ಮಹಿಳಾ ಉದ್ಯಮಿಯಾಗಿದ್ದಾರೆ. ಗೋದ್ರೆಜ್ ಸಾಮ್ರಾಜ್ಯದ ಮೂರನೇ ತಲೆಮಾರಿನ ವಾರಸುದಾರರಾಗಿರುವ ಸ್ಮಿತಾ, ಗೋದ್ರೇಜ್ ಕಂಪನಿಯಲ್ಲಿ ಸೋದರರಿಗೆ ಸರಿಸಮನಾಗಿ ಐದನೇ ಒಂದು ಭಾಗದಷ್ಟು ಪಾಲು ಹೊಂದಿದ್ದಾರೆ.

ಜೂನ್ 30, 2018 ರವರೆಗೆ ಮಹಿಳೆಯರು ಗಳಿಸಿರುವ ಆಸ್ತಿಯ ಆಧಾರದ ಮೇಲೆ ದೇಶದಲ್ಲಿ ಮುಂಚೂಣಿಯಲ್ಲಿರುವ ಶ್ರೀಮಂತ ಮಹಿಳೆyr ಪಟ್ಟಿಯನ್ನ ಪ್ರಕಟಿಸಲಾಗಿದೆ. ಬಯೋಕಾನ್ ಮುಖ್ಯಸ್ಥೆಯಾದ ಕಿರಣ್ ಮಜುಮ್ದಾರ್ ಷಾ ಸ್ವಪ್ರಯತ್ನದಿಂದ ಬೆಳೆದ ವಾಣಿಜ್ಯೋದ್ಯಮಿ ಅನ್ನೋ ಖ್ಯಾತಿಗೆ ಪಾತ್ರರಾದ್ರೆ ಶಾರದಾ ಅಗರ್ವಾಲ್ ಅತಿ ಕಿರಿಯ ಸ್ವಾವಲಂಬಿ ವಾಣಿಜ್ಯೋದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.

ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಶೇಕಡಾ 50 ರಷ್ಟು ಮಹಿಳೆಯರು ದೇಶದ ಪ್ರಮುಖ ನಗರಗಳಿಗೆ ಸೇರಿದವರಾಗಿದ್ದಾರೆ. ಪಟ್ಟಿಯಲ್ಲಿರುವ ಸರಾಸರಿ ಮಹಿಳೆಯರು ಸಂಪಾದಿಸಿರುವ ಆಸ್ತಿಯ ಮೌಲ್ಯ 4000 ಕೋಟಿ ರೂಪಾಯಿಗಳಾಗಿದ್ದು 1000 ಕೋಟಿ ರೂಪಾಯಿ ಅತ್ಯಂತ ಕಡಿಮೆ ಗಳಿಕೆಯ ಆಸ್ತಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...