alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 1299 ರೂ.ಗೆ ಮಾಡಿ ವಿಮಾನ ಪ್ರಯಾಣ

ವಿಮಾನದಲ್ಲಿ ಪ್ರಯಾಣ ಬೆಳೆಸುವ ಪ್ಲಾನ್ ಮಾಡ್ತಿದ್ದರೆ ನಿಮಗೊಂದು ಖುಷಿ ಸುದ್ದಿ. ಗೋಏರ್ ಭರ್ಜರಿ ಆಫರ್ ನೀಡ್ತಿದೆ. ಮಾನ್ಸೂನ್ ಆಫರ್ ಸೋಮವಾರ ಮಧ್ಯರಾತ್ರಿಯಿಂದ ಶುರುವಾಗಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ಈ ಆಫರ್ ನಲ್ಲಿ ಪ್ರಯಾಣಿಕರು ಕೇವಲ 1299 ರೂಪಾಯಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಬಹುದಾಗಿದೆ.

ಸೇಲ್ ನಲ್ಲಿ ಬೇರೆ ಬೇರೆ ಮಾರ್ಗ, ವಿಮಾನ ಹಾಗೂ ಸಮಯಕ್ಕೆ ಬೇರೆ ಬೇರೆ ಆಫರ್ ನೀಡಲಾಗಿದೆ. ಗೋ ಏರ್ ಸದ್ಯ 23 ಸ್ಥಳಗಳಿಗೆ ವಾರಕ್ಕೆ 1544 ಗಿಂತ ಹೆಚ್ಚು ವಿಮಾನಗಳನ್ನು ನಿರ್ವಹಿಸುತ್ತಿದೆ. ಈ ಸೇಲ್ ನಲ್ಲಿ ಬುಕ್ ಆದ ಟಿಕೆಟ್ ಮರುಪಾವತಿ ಸಾಧ್ಯವಿಲ್ಲ. ತೆರಿಗೆ ಮತ್ತು ಇತರ ಶುಲ್ಕಗಳು ಮಾತ್ರ ಮರುಪಾವತಿಯಾಗಲಿವೆ.

ಜುಲೈ ತ್ರೈಮಾಸಿಕದಲ್ಲಿ ಜನರು ಕಡಿಮೆ ಪ್ರಯಾಣ ಮಾಡ್ತಾರೆ. ಜನರನ್ನು ಆಕರ್ಷಿಸಲು ಗೋ ಏರ್ ಈ ಆಫರ್ ನೀಡ್ತಿದೆ. ಎಲ್ಲ ಶುಲ್ಕ ಸೇರಿ ವಿಮಾನ ದರ 1299 ಎಂದು ಗೋ ಏರ್ ಹೇಳಿದೆ. 23 ಸೆಕ್ಟರ್ ನಲ್ಲಿ ಎಲ್ಲಿ ಬೇಕಾದ್ರೂ ಟಿಕೆಟ್ ಬುಕ್ ಮಾಡಬಹುದು ಎಂದು ಗೋಏರ್ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...