alex Certify
ಕನ್ನಡ ದುನಿಯಾ       Mobile App
       

Kannada Duniya

2016 ರಲ್ಲಿ ಭಾರತಕ್ಕೆ ಕೀರ್ತಿ ತಂದ ಸುಂದರಿಯರು….

srinidhi-shetty3

ಭಾರತ ಸುಂದರ ದೇಶ. ಅದೇ ರೀತಿ ಸುಂದರಿಯರಿಗೂ ಇಲ್ಲಿ ಬರವಿಲ್ಲ. ತಮ್ಮ ಸೌಂದರ್ಯದಿಂದ್ಲೇ ಈ ವರ್ಷ ಕೂಡ ಹಲವರು ದೇಶಕ್ಕೆ ಗೌರವ ತಂದಿದ್ದಾರೆ.

ಶ್ರೀನಿಧಿ ಶೆಟ್ಟಿ : ಈಕೆ ಮಂಗಳೂರಿನ ಚೆಲುವೆ. 2016ರ ಮಿಸ್ ಸೂಪರ್ ಇಂಟರ್ ನ್ಯಾಶನಲ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ 3 ವರ್ಷಗಳಲ್ಲಿ 2 ಬಾರಿ ಈ ಪ್ರಶಸ್ತಿ ಗೆದ್ದ ಹೆಮ್ಮೆ ಭಾರತದ ಪಾಲಾಗಿದೆ. ಎಕ್ಸೆಂಚರ್ ಕಂಪನಿಯಲ್ಲಿ ಸಾಫ್ಟ್ ಎಂಜಿನಿಯರ್ ಆಗಿದ್ದ ಶ್ರೀನಿಧಿ ಶೆಟ್ಟಿ ಕೆಲಸ ಬಿಟ್ಟು ಬ್ಯೂಟಿ ಕ್ವೀನ್ ಆಗುವ ತಮ್ಮ ಕನಸಿನ ಬೆನ್ನೇರಿ ಹೊರಟಿದ್ರು. 2014ರಲ್ಲಿ ಶಿವಮೊಗ್ಗದ ಆಶಾ ಭಟ್ ಮಿಸ್ ಸೂಪರ್ ಇಂಟರ್ನಾಶನಲ್ ಸ್ಪರ್ಧೆಯಲ್ಲಿ ಗೆದ್ದಿದ್ದರು. ಶ್ರೀನಿಧಿ ಹುಟ್ಟಿದ್ದು ಮುಂಬೈನಲ್ಲಾದ್ರೂ ಬೆಳೆದಿದ್ದು ಮಂಗಳೂರಲ್ಲಿ. ವಿದ್ಯಾಭ್ಯಾಸವೆಲ್ಲ ಬೆಂಗಳೂರಲ್ಲಿ. 80 ಸ್ಪರ್ಧಿಗಳನ್ನು ಹಿಂದಿಕ್ಕಿ ಗೆಲುವು ಸಾಧಿಸಿದ್ದರು.

lopamudra-raut

ಲೋಪಮುದ್ರಾ ರಾವತ್ : ನಾಗ್ಪುರ ಮೂಲದ ಲೋಪಮುದ್ರಾ ರಾವತ್ ಎಲೆಕ್ಟ್ರಿಕಲ್ ಎಂಜಿನಿಯರ್. ಆದ್ರೆ ಫ್ಯಾಷನ್ ಅನ್ನೋದು ಅವಳ ರಕ್ತದಲ್ಲೇ ಇದೆ. 2016ರ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಸ್ಪರ್ಧೆಯಲ್ಲಿ ಲೋಪಮುದ್ರಾ ರನ್ನರ್ ಅಪ್ ಆಗಿದ್ದಾರೆ. ಬೆಸ್ಟ್ ನ್ಯಾಶನಲ್ ಕಾಸ್ಟ್ಯೂಮ್ ಸ್ಪರ್ಧೆಯಲ್ಲೂ ವಿಜೇತರಾಗಿದ್ದಾರೆ.

pankhuri1

ಪಂಖುರಿ ಗಿದ್ವಾನಿ : ಈ ವರ್ಷ ಭಾರತವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಬ್ಯೂಟಿ ಕ್ವೀನ್ ಎಂಬ ಹೆಗ್ಗಳಿಕೆ ಇವಳದ್ದು. ಲಖ್ನೋ ಮೂಲದ ಪಂಖುರಿಗೆ ಇನ್ನೂ 18 ರ ಹರೆಯ. 2016 ರ ಫೆಮಿನಾ ಮಿಸ್ ಇಂಡಿಯಾ ಗ್ರಾಂಡ್ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್.

priyadarshani

ಪ್ರಿಯದರ್ಶಿನಿ ಚಟರ್ಜಿ: ‘Miss World Pageant’ ಸ್ಪರ್ಧೆಯಲ್ಲಿ ಪಾಲ್ಗೊಂಡ ಈಶಾನ್ಯ ರಾಜ್ಯದ ಮೊದಲ ಚೆಲುವೆ ಪ್ರಿಯದರ್ಶಿನಿ. ಅಸ್ಸಾಂ ಮೂಲದ ಪ್ರಿಯದರ್ಶಿನಿಗೆ 19 ವರ್ಷ. ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಪ್ರಶಸ್ತಿಯೂ ಇವಳ ಪಾಲಾಗಿದೆ.

priyanka-yoshikawa11

ಪ್ರಿಯಾಂಕಾ ಯೋಶಿಕವಾ : ಈ ವರ್ಷ ಮಿಸ್ ಜಪಾನ್ ಆಗಿ ಆಯ್ಕೆಯಾದವರು ಭಾರತೀಯ ಮೂಲದ ಪ್ರಿಯಾಂಕಾ ಯೋಶಿಕವಾ. ಈಕೆಯ ತಂದೆ ಭಾರತದವರು. 22ರ ಹರೆಯದ ಪ್ರಿಯಾಂಕಾ ಆನೆಗಳ ತರಬೇತುದಾರರಾಗಿದ್ದರು.

rewati14

ರೇವತಿ ಚೆಟ್ರಿ : ‘ಮಿಸ್ ವರ್ಲ್ಡ್ ಯೂನಿವರ್ಸಿಟಿ-2016’ರ ವಿಜೇತೆ ರೇವತಿ ಚೆಟ್ರಿ. 2015ರ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲೂ ರೇವತಿ ಪಾಲ್ಗೊಂಡಿದ್ರು. ಮಿಸ್ ಏಷ್ಯಾ ಆಗಿಯೂ ರೇವತಿ ಆಯ್ಕೆಯಾಗಿದ್ದಾರೆ. ಮಿಸ್ ಇಂಟರ್ ನ್ಯಾಶನಲ್-2016 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರೇವತಿಗೆ ಗೆಲುವು ಒಲಿದಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...