alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ನಾಳೆಯಿಂದ ದುಬಾರಿಯಾಗಲಿದೆ ಈ ವಸ್ತು

ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯಿಂದ ಈಗಾಗಲೇ ಕಂಗೆಟ್ಟಿರುವ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಅಗತ್ಯ ವಸ್ತುಗಳ ಬೆಲೆ ಕೂಡ ಏರಿಕೆಯಾಗುತ್ತಿದ್ದು, ಇದರ ಮಧ್ಯೆ ಜೂನ್ ಒಂದರ ನಾಳೆಯಿಂದ ಕೆಲ ವಸ್ತುಗಳು ದುಬಾರಿಯಾಗಲಿವೆ.

ಫ್ರಿಜ್, ವಾಷಿಂಗ್ ಮಷೀನ್ ಹಾಗೂ ಏರ್ ಕಂಡೀಷನರ್ ಗಳ ದರದಲ್ಲಿ ಶೇಕಡ ಎರಡರಿಂದ ಶೇಕಡಾ ಐದರಷ್ಟು ಏರಿಕೆಯಾಗಲಿದೆ ಎನ್ನಲಾಗಿದ್ದು, ತೈಲ ಬೆಲೆ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಹಾಗೂ ಕಚ್ಚಾ ಪದಾರ್ಥಗಳಾದ ಉಕ್ಕು ಹಾಗೂ ತಾಮ್ರದ ಬೆಲೆ ಏರಿಕೆ ಆಗಿರುವುದು ಇದಕ್ಕೆ ಕಾರಣವೆನ್ನಲಾಗಿದೆ.

ಇವುಗಳ ಮಾರಾಟದಲ್ಲಿ ಕುಸಿತವಾಗಿದ್ದರೂ ಬೆಲೆ ಏರಿಕೆ ಮಾಡುವ ಅನಿವಾರ್ಯ ಸ್ಥಿತಿಯಲ್ಲಿ ಕಂಪನಿಗಳಿವೆ ಎನ್ನಲಾಗಿದೆ. ಜೂನ್ ಒಂದರ ನಾಳೆಯಿಂದಲೇ ನೂತನ ದರಗಳು ಜಾರಿಗೆ ಬರುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...