alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ಟೆಲ್ ಪ್ರಿ ಪೇಯ್ಡ್ ಗ್ರಾಹಕರಿಗೆ ಬಂಪರ್ ಆಫರ್

ಟೆಲಿಕಾಂ ಕ್ಷೇತ್ರಕ್ಕೆ ಜಿಯೋ ಕಾಲಿರಿಸುತ್ತಿದ್ದಂತೆಯೇ ಅಲ್ಲೋಲಕಲ್ಲೋಲ ಶುರುವಾಗಿತ್ತು. ಗ್ರಾಹಕರನ್ನು ಸೆಳೆಯಲು ಉಚಿತ ಕೊಡುಗೆಗಳನ್ನು ಆರಂಭಿಸಿದ್ದ ಜಿಯೋಗೆ ಸೆಡ್ಡು ಹೊಡೆಯಲು ಇತರೆ ಕಂಪನಿಗಳೂ ಆಫರ್ ಗಳ ಮೇಲೆ ಆಫರ್ ನೀಡುತ್ತಿದ್ದು, ಇದು ಗ್ರಾಹಕರಿಗೆ ಅನುಕೂಲಕರವಾಗಿ ಪರಿಣಮಿಸಿದೆ.

ಇದೀಗ ದೇಶದ ಅಗ್ರಗಣ್ಯ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್ಟೆಲ್ ತನ್ನ ಪ್ರಿ ಪೇಯ್ಡ್ ಗ್ರಾಹಕರಿಗೆ ಭರ್ಜರಿ ಕೊಡುಗೆಯೊಂದನ್ನು ಪ್ರಕಟಿಸಿದೆ. ಏರ್ಟೆಲ್ ನ ಈ ಆಫರ್ ಸರಿಸುಮಾರು ಒಂದು ವರ್ಷದವರೆಗೆ(360 ದಿನ) ಚಾಲ್ತಿಯಲ್ಲಿರುವುದು ವಿಶೇಷ.

ಆಫರ್ ಪ್ರಕಾರ ಏರ್ಟೆಲ್ ಪ್ರಿ ಪೇಯ್ಡ್ ಗ್ರಾಹಕರು 3,999 ರೂ. ರಿ ಚಾರ್ಜ್ ಮಾಡಿಸಿದರೆ 360 ದಿನದವರೆಗೆ ಅನಿಯಮಿತ ಕರೆ, ಪ್ರತಿ ನಿತ್ಯ 100 ಎಸ್ಎಂಎಸ್ ಹಾಗೂ 360 ದಿನಕ್ಕೆ 300 ಜಿಬಿ ಡೇಟಾ ಲಭ್ಯವಾಗಲಿದೆ. ಈ ಆಫರನ್ನು ನಾನ್ ಕಮರ್ಷಿಯಲ್ ಉಪಯೋಗಕ್ಕೆ ಮಾತ್ರವೆಂದು ಕಂಪನಿ ಷರತ್ತು ವಿಧಿಸಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...