alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ಲೈನ್ ನಲ್ಲಿ ಹಳೆ ಕಾರು ಖರೀದಿ ಮುನ್ನ ಈ ಸುದ್ದಿ ಓದಿ

sell-my-car

ಆನ್ಲೈನ್ ನಲ್ಲಿ ಕಾರು ಖರೀದಿ ಮಾಡುವ ಮನಸ್ಸು ಮಾಡಿದ್ರೆ ಸ್ವಲ್ಪ ಎಚ್ಚರ. ಕ್ರೈಂ ಬ್ರ್ಯಾಂಚ್ ವಿಭಾಗ ಡಸ್ಟರ್, ರೋನಾಲ್ಡ್ ನಂತ ದುಬಾರಿ ಹಾಗೂ ಐಷಾರಾಮಿ ಕಾರುಗಳನ್ನು ಕಳ್ಳತನ ಮಾಡಿ, ಆನ್ಲೈನ್ ನಲ್ಲಿ ಮಾರಾಟ ಮಾಡ್ತಿದ್ದ ಗ್ಯಾಂಗ್ ಒಂದನ್ನು ಬಂಧಿಸಿದೆ.

ರಾಷ್ಟ್ರದ ರಾಜಧಾನಿ ದೆಹಲಿ ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಈ ಗ್ಯಾಂಗ್ ತನ್ನ ದಂಧೆ ನಡೆಸ್ತಾ ಇತ್ತು. ಕದ್ದ ಕಾರಿಗೆ ನಕಲಿ ನಂಬರ್ ಆಗಿ ಆನ್ಲೈನ್ ನಲ್ಲಿ ಸೆಕೆಂಡ್ ಹ್ಯಾಂಡ್ ಕಾರಿನ ಹೆಸರಿನಲ್ಲಿ ಮಾರಾಟ ಮಾಡ್ತಾ ಇತ್ತು. ಪೊಲೀಸರು ಇಬ್ಬರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ವಿಚಾರಣೆ ವೇಳೆ ಅನೇಕ ಆಶ್ಚರ್ಯಕಾರಿ ವಿಚಾರಗಳು ತಿಳಿದು ಬಂದಿವೆ. ವಿಮಾ ಕಂಪನಿಗಳ ನಿರ್ಲಕ್ಷ್ಯ ಕೂಡ ಎದ್ದು ಕಾಣ್ತಾ ಇದೆ. ದೆಹಲಿ, ಹರಿಯಾಣ, ಉತ್ತರ ಪ್ರದೇಶದಲ್ಲಿ ಐಷಾರಾಮಿ ಕಾರುಗಳನ್ನು ಕಳ್ಳತನ ಮಾಡ್ತಿದ್ದ ಆರೋಪಿಗಳು ಹಾಳಾಗಿರುವ ಕಾರಿನ ನಂಬರ್ ಪ್ಲೇಟ್ ಬಳಸ್ತಾ ಇದ್ದರು. ಕಡಿಮೆ ಬೆಲೆಗೆ ಆನ್ಲೈನ್ ನಲ್ಲಿ ಕಾರುಗಳನ್ನು ಮಾರಾಟ ಮಾಡಿ ಲಕ್ಷಗಟ್ಟಲೆ ಲಾಭ ಪಡೆಯುತ್ತಿದ್ದರು.

ವ್ಯಾಪಾರದಲ್ಲಿ ನಷ್ಟವಾದ ನಂತ್ರ 23 ಹಾಗೂ 34 ವರ್ಷದ ಆರೋಪಿಗಳು ಈ ಕೆಲಸಕ್ಕೆ ಇಳಿದಿದ್ದರು. ಈವರೆಗೆ ಸುಮಾರು 200ಕ್ಕೂ ಹೆಚ್ಚು ಕಾರುಗಳನ್ನು ಕಳ್ಳತನ ಮಾಡಿದ್ದಾರೆ ಆರೋಪಿಗಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...