alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರುಕಟ್ಟೆಗೆ ಬಂತು ಸ್ಯಾಮ್ಸಂಗ್ ನ ಎರಡು ಸ್ಮಾರ್ಟ್ಫೋನ್

ಫೋಟೋ ಸೋರಿಕೆಯಾದ ಅನೇಕ ದಿನಗಳ ನಂತ್ರ ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸಂಗ್ ಕಂಪನಿ ತನ್ನ ಎ ಸರಣಿಯ ಮತ್ತೆರದು ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಸ್ಯಾಮ್ಸಂಗ್ ಎ9 ಸ್ಟಾರ್ ಹಾಗೂ ಎ9 ಸ್ಟಾರ್ ಲೈಟ್ ಬಿಡುಗಡೆ ಮಾಡಿದೆ. ಈ ಎರಡೂ ಸ್ಮಾರ್ಟ್ಫೋನ್ ಆಂಡ್ರಾಯ್ಡ್ ನ ಒರಿಯಾ 8.0 ಜೊತೆ ಬರಲಿದೆ.

ಜೂನ್ 14ರಂದು ಮುಂಗಡ ಬುಕ್ಕಿಂಗ್ ಶುರುವಾಗಲಿದ್ದು, ಜೂನ್ 15 ರ ನಂತ್ರ ಫೋನ್ ಗ್ರಾಹಕರ ಕೈ ಸೇರಲಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎ9 ಸ್ಟಾರ್ ಸ್ಮಾರ್ಟ್ಫೋನ್ ಬೆಲೆ ಯುವಾನ್ (ಸುಮಾರು 31, 600 ರೂಪಾಯಿ). ಸ್ಯಾಮ್ಸಂಗ್ ಎ9 ಸ್ಟಾರ್ ಲೈಟ್ ಫೋನ್ ಬೆಲೆ 1,999 ಯುವಾನ್ ( ಸುಮಾರು 21,100 ರೂಪಾಯಿ).

ಕಪ್ಪು ಹಾಗೂ ಬಿಳಿ ಬಣ್ಣದಲ್ಲಿ ಈ ಎರಡೂ ಫೋನ್ ಲಭ್ಯವಿದೆ. ಚೀನಾ ಮಾರುಕಟ್ಟೆಗೆ ಈ ಫೋನ್ ಪ್ರವೇಶ ಮಾಡಿದೆ. ಭಾರತ ಮಾರುಕಟ್ಟೆಗೆ ಯಾವಾಗ ಬರಲಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಎರಡೂ ಫೋನ್ ಗಳು ಸಾಕಷ್ಟು ವೈವಿದ್ಯತೆಯನ್ನು ಹೊಂದಿದ್ದು, ಭಾರತೀಯ ಫೋನ್ ಪ್ರಿಯರು ಹೊಸ ಸ್ಮಾರ್ಟ್ಫೋನ್ ಖರೀದಿಗೆ ಕಾದು ಕುಳಿತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...