alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಏರಿಕೆ

ಕರ್ನಾಟಕ ವಿಧಾನಸಭೆ ಚುನಾವಣೆಯ ನಂತರ ಸತತ ಏರಿಕೆ ಕಾಣುವ ಮೂಲಕ ವಾಹನ ಮಾಲೀಕರನ್ನು ಕಂಗೆಡಿಸಿರುವ ಪೆಟ್ರೋಲ್ ಹಾಗೂ ಡೀಸೆಲ್ ದರ 16ನೇ ದಿನವೂ ಏರಿಕೆ ಕಾಣುವ ಮೂಲಕ ಮತ್ತಷ್ಟು ಶಾಕ್ ನೀಡಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈಗ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 78.43 ರೂ. ಗಳಾಗಿದ್ದರೆ, ಮುಂಬೈನಲ್ಲಿ ಈ ದರ 86.24 ರೂ.ಗಳಾಗಿದೆ.

ಹಾಗೆಯೇ ಡೀಸೆಲ್ ದರದಲ್ಲಿ ಏರಿಕೆಯಾಗಿದ್ದು, ನವದೆಹಲಿಯಲ್ಲಿ ಪ್ರತಿ ಲೀಟರ್ ಗೆ 69.31 ರೂ. ಗೆ ತಲುಪಿದ್ದು, ಮುಂಬೈನಲ್ಲಿ ಈ ದರ 73.79 ರೂ. ಗಳಾಗಿದೆ. ಇದರ ಮಧ್ಯೆ ಸಿ ಎನ್ ಜಿ ದರವೂ ಪ್ರತಿ ಕೆಜಿಗೆ 1.36 ಏರಿಕೆಯಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತೈಲ ಉತ್ಪನ್ನಗಳನ್ನು ಜಿ ಎಸ್ ಟಿ ವ್ಯಾಪ್ತಿಗೆ ತರುವುದಾಗಿ ಹೇಳಿದ್ದರೂ ಅದು ಸದ್ಯಕ್ಕೆ ಕಾರ್ಯರೂಪಕ್ಕೆ ಬರುವುದು ಕಷ್ಟವೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...