alex Certify
ಕನ್ನಡ ದುನಿಯಾ       Mobile App
       

Kannada Duniya

‘ಭಾರತ್ ಬಂದ್’ ಬಳಿಕವೂ ಏರಿಕೆಯಾಗಿದೆ ತೈಲ ಬೆಲೆ

ಸೆಪ್ಟೆಂಬರ್ 10 ರಂದು ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳು ತೈಲ ಬೆಲೆ ಏರಿಕೆ ವಿರೋಧಿಸಿ ಭಾರತ್ ಬಂದ್ ಆಚರಿಸಿದವು. ಬಂದ್ ಭಾಗಶಃ ಯಶಸ್ವಿಯಾಯ್ತು. ಆದ್ರೆ ಬಂದ್ ಮಾಡಿದ ಮೂಲ ಕಾರಣದಲ್ಲಿ ಯಶಸ್ಸು ಸಿಕ್ಕಿತಾ ಅನ್ನೋದನ್ನ ನೋಡೋಕೆ ಹೋದ್ರೆ ಅಡ್ಡಡ್ಡ ತಲೆಯಾಡಿಸಬೇಕಾಗುತ್ತೆ. ಯಾಕಂದ್ರೆ ಬಂದ್ ನಡೆಸಿದ ಮೇಲೂ ಪೆಟ್ರೋಲ್ ದರ ಇಳಿಕೆ ಕಾಣದೆ ಮತ್ತೆ ಗಗನಮುಖಿಯಾಗುತ್ತಲೇ ಸಾಗಿದೆ.

ಮಂಗಳವಾರ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆ ಕಂಡು ಬಂದಿದೆ. ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ ಪ್ರತಿ ಲೀಟರ್ ಗೆ 80 ರೂಪಾಯಿ 87 ಪೈಸೆ ಮತ್ತು 72 ರೂಪಾಯಿ 97 ಪೈಸೆ ದಾಖಲಾಗಿದೆ. ಸೋಮವಾರಕ್ಕಿಂತ ಎರಡೂ ತೈಲಗಳಲ್ಲಿ 14 ಪೈಸೆ ದರ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ 88.26 ರೂಪಾಯಿಗಳಾಗಿದ್ದು, ಡೀಸೆಲ್ ದರ 77.47 ರೂಪಾಯಿಗೆ ನಿಗದಿಯಾಗಿದೆ. ಸೋಮವಾರಕ್ಕೆ ಹೋಲಿಸಿದ್ರೆ 15 ಪೈಸೆ ಹೆಚ್ಚಳವಾಗಿದೆ.

ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡೋದ್ರಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನ ಕಡಿಮೆ ಮಾಡಬಹುದು ಅಂತ ಹೇಳಲಾಗ್ತಿದೆ. ಆದ್ರೆ ಬಿಹಾರ್, ಕೇರಳ, ಪಂಜಾಬ್ ನಂತಾ ರಾಷ್ಟ್ರಗಳಲ್ಲಿ ತೈಲಗಳ ಮೇಲಿನ ವಾಣಿಜ್ಯ ಸುಂಕ ಅಥವಾ ವ್ಯಾಟ್ ಕಡಿತಗೊಳಿಸೋಕೆ ಸಾಧ್ಯವಿಲ್ಲ.

ಬಂದ್ ಹಿನ್ನಲೆಯಲ್ಲಿ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಪೆಟ್ರೋಲ್ ಬೆಲೆ ಏರಿಕೆ ಅಥವಾ ಇಳಿಕೆ ನಮ್ಮ ಕೈನಲ್ಲಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಗಳ ಆಧಾರದ ಮೇಲೆ ಎಲ್ಲವೂ ಬದಲಾಗುತ್ತದೆ. ವೆಜಿಜುವೆಲಾದಲ್ಲಿ ಆರ್ಥಿಕ ದಿವಾಳಿತನವಿದೆ. ತೈಲೋತ್ಪನ್ನ ರಾಷ್ಟ್ರಗಳು ತೈಲ ಆಮದು ನೀತಿಯಲ್ಲಿ ಉದಾರತೆ ತೋರಿಸ್ತಿಲ್ಲ. ಇರಾನ್ ಮೇಲಿನ ಅಮೆರಿಕ ತೈಲ ರಫ್ತಿನ ಮೇಲೆ ದಿಗ್ಬಂಧನ ಹೇರಿರೋದು ಕೂಡ ತೈಲ ಬೆಲೆ ಹೆಚ್ಚಳಕ್ಕೆ ಕಾರಣ ಅಂತ ಹೇಳ್ತಿದ್ದಾರೆ.

ಇದೇ ಸಂದರ್ಭದಲ್ಲಿ ಭಾರತ್ ಬಂದ್ ವೇಳೆ ನಡೆದ ಅಹಿತಕರ ಘಟನೆಯನ್ನ ರವಿಶಂಕರ್ ಪ್ರಸಾದ್ ಟೀಕಿಸಿದ್ದಾರೆ. ಬಂದ್ ಆಚರಣೆಯ ವೇಳೆ ಜನರು ಅಂಬುಲೆನ್ಸ್ ಗೆ ದಾರಿ ಬಿಡದೆ ಒಂದು ಮಗು ಸಾವನ್ನಪ್ಪಿದೆ. ಇದಕ್ಕೆ ಯಾರು ಹೊಣೆ ಅಂತ ರವಿಶಂಕರ್ ಪ್ರಸಾದ್ ಪ್ರಶ್ನೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...