alex Certify
ಕನ್ನಡ ದುನಿಯಾ       Mobile App
       

Kannada Duniya

ನಿಲ್ಲದ ತೈಲ‌ ಬೆಲೆ ಏರಿಕೆ ಸಂಕಷ್ಟ

ನವದೆಹಲಿ: ದೇಶದಲ್ಲಿ ಪ್ರತಿನಿತ್ಯ ಪೆಟ್ರೋಲ್-ಡಿಸೇಲ್ ಬೆಲೆ‌ ಏರಿಕೆಯಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ‌ ವಿರೋಧ ವ್ಯಕ್ತವಾಗುತ್ತಿದ್ದರೂ ತೈಲ‌ ಬೆಲೆ ಇಳಿಕೆಯಾಗುವ ಸೂಚನೆ ಸಿಗುತ್ತಿಲ್ಲ.

ಸೋಮವಾರವೂ ತೈಲ‌ಬೆಲೆ‌ ಏರಿಕೆ‌ ಮುಂದುವರೆದಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 82 ರ ಗಡಿ ದಾಟಿದರೆ,‌ ಮುಂಬೈನಲ್ಲಿ ಪ್ರತಿ ಲೀಟರ್ ಗೆ 90 ರೂಪಾಯಿ‌ ಗಡಿಯಲ್ಲಿ ನಿಂತಿದೆ.

ಆ.1 ರಿಂದ ನಿರಂತರವಾಗಿ‌‌ ಏರಿಕೆಯಾಗುತ್ತಿರುವ ತೈಲ‌ಬೆಲೆ‌ ಭಾನುವಾರವೂ ದೆಹಲಿಯಲ್ಲಿ‌ 15 ಪೈಸೆ ಏರಿಕೆ‌‌ಯಾಗಿದೆ. ಇತರೆ ಮೆಟ್ರೋ ಸಿಟಿಗಳಿಗೆ ಹೋಲಿಸಿದರೆ ದೆಹಲಿಯಲ್ಲಿಯೇ ತೈಲ ಬೆಲೆ ಕಡಿಮೆಯಿದೆ.

ತೈಲ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೂ, ಕೇಂದ್ರ ಸರಕಾರ ತೆರಿಗೆ ಇಳಿಸುವ ಬಗ್ಗೆ ಆಲೋಚಿಸಿಲ್ಲ. ಹಣಕಾಸು ಸಚಿವ ಅರುಣ್ ಜೇಟ್ಲಿ‌ ನೇತೃತ್ವದಲ್ಲಿ ನಡೆದ ಇಲಾಖೆ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆಸಿಲ್ಲ ಎನ್ನಲಾಗುತ್ತಿದೆ.

ಒಂದು ವೇಳೆ ತೈಲದ ಮೇಲಿನ ಅಬಕಾರಿ‌ ಸುಂಕ ಕಡಿತಗೊಳಿಸಿದರೆ, ಕೇಂದ್ರದ ಮೇಲೆ ದಿನಕ್ಕೆ 14 ಸಾವಿರ ಕೋಟಿ‌ ರೂ. ನಷ್ಟ ಉಂಟಾಗಲಿದೆ. ಇದರಿಂದ‌ ದೇಶದ ಆರ್ಥಿಕ‌ ಸ್ಥಿತಿ‌ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವಿರುವುದರಿಂದ ಸರಕಾರ ತಟಸ್ಥವಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...