alex Certify
ಕನ್ನಡ ದುನಿಯಾ       Mobile App
       

Kannada Duniya

ತೈಲ ಬೆಲೆ ಏರಿಕೆ ಎಫೆಕ್ಟ್: ಏರಿಕೆಯಾಗಿದೆ ಈ ವಸ್ತುಗಳ ಬೆಲೆ

ದಿನೇ ದಿನೇ ಹೆಚ್ಚಾಗುತ್ತಿರುವ ತೈಲ ದರ ಶ್ರೀಸಾಮಾನ್ಯನ ಬದುಕಿನ ಮೇಲೆ ಅಡ್ಡ ಪರಿಣಾಮಗಳನ್ನೂ ಬೀರುತ್ತಿದೆ. ಹೆಚ್ಚಾಗುತ್ತಿರುವ ತೈಲದರ ಜನಸಾಮಾನ್ಯದ ಜೇಬಿಗೆ ಹೊರೆಯನ್ನ ಜಾಸ್ತಿ ಮಾಡ್ತಿದೆ. ಅವರ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿರೋದು ಪೆಟ್ರೋಲ್ ದರಕ್ಕೆ ಪರ್ಯಾಯವಾಗಿ ಏರುತ್ತಿರುವ ದಿನ ಬಳಕೆಯ ಅಗತ್ಯ ವಸ್ತುಗಳ ದರ.

ಹೌದು. ಈ ವಿಚಾರವನ್ನ ನೀವು ನಂಬಲೇಬೇಕು ಅಗತ್ಯ ವಸ್ತುಗಳ ತಯಾರಿಕೆ ಮತ್ತು ಸರಬರಾಜು ಮಾಡುವ ಸಂಸ್ಥೆಗಳು ಕೂಡ ಹೆಚ್ಚುತ್ತಿರುವ ತೈಲ ಬೆಲೆಯ ಹೊರೆಯನ್ನ ಗ್ರಾಹಕರ ಮೇಲೆ ಹೇರುತ್ತಿವೆ. ತಮ್ಮ ಉತ್ಪನ್ನಗಳ ಬೆಲೆಯನ್ನ ಈಗಾಗ್ಲೇ ಕೆಲ ಕಂಪನಿಗಳು ಶೇಕಡಾ 5ರಿಂದ ಶೇಕಡಾ 8ರಷ್ಟು ಹೆಚ್ಚು ಮಾಡಿವೆ.

ಮುಂದಿನ ತಿಂಗಳಿನಿಂದ ಬಹುತೇಕ ಎಲ್ಲಾ ದಿನಬಳಕೆಯ ವಸ್ತುಗಳ ತಯಾರಿಕೆ ಮತ್ತು ಸರಬರಾಜು ಸಂಸ್ಥೆಗಳು ಕೂಡ ತಮ್ಮ ಉತ್ಪನ್ನಗಳ ದರವನ್ನು ದುಪ್ಪಟ್ಟಾಗಿಸಲಿವೆಯಂತೆ. ಈಗಾಗ್ಲೇ ಶಾಂಪೂ, ಸಾಬೂನು, ಹಾಲು, ಬಿಸ್ಕತ್ತುಗಳ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರ್ತಿದೆ.

ಎಲೆಕ್ಟ್ರಿಕಲ್ ಸಾಮಗ್ರಿಗಳ ದರವನ್ನು ಏರಿಸಲು ಸಂಸ್ಥೆಗಳು ಚಿಂತನೆ ನಡೆಸಿವೆಯಂತೆ. ದೇಶೀಯ ವಸ್ತುಗಳು ಮಾತ್ರವಲ್ಲ. ವಿದೇಶಗಳಿಂದ ಆಮದು ಮಾಡಿಕೊಂಡ ಉತ್ಪನ್ನಗಳ ಬೆಲೆಯಲ್ಲೂ ಏರಿಕೆ ಕಂಡು ಬರುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...