alex Certify
ಕನ್ನಡ ದುನಿಯಾ       Mobile App
       

Kannada Duniya

ನಿಲ್ಲದ ಬೆಲೆ ಏರಿಕೆ ಬಿಸಿ: ಸೋಮವಾರವೂ ಹೆಚ್ಚಾಯ್ತು ಪೆಟ್ರೋಲ್-ಡಿಸೇಲ್ ಬೆಲೆ

ಪೆಟ್ರೋಲ್-ಡಿಸೇಲ್ ದರ ಇಳಿಕೆಗೆ ಫುಲ್ ಸ್ಟಾಪ್ ಬೀಳುವ ಲಕ್ಷಣ ಕಾಣ್ತಿಲ್ಲ. ಕೇಂದ್ರ ಸರ್ಕಾರ ಪೆಟ್ರೋಲ್-ಡಿಸೇಲ್ ಬೆಲೆಯನ್ನು 2.50 ರೂಪಾಯಿ ಇಳಿಕೆ ಮಾಡಿದ್ದರೂ ಪೆಟ್ರೋಲ್-ಡಿಸೇಲ್ ಬೆಲೆ ಮಾತ್ರ ಇಳಿಕೆಯಾಗ್ತಿಲ್ಲ. ಸೋಮವಾರವೂ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಪೆಟ್ರೋಲ್ ಬೆಲೆ 0.21 ಪೈಸೆ ಹೆಚ್ಚಳವಾಗಿದೆ. ಡಿಸೇಲ್ 0.29 ಪೈಸೆ ಏರಿಕೆ ಕಂಡಿದೆ. ದೆಹಲಿಯಲ್ಲಿ ಸೋಮವಾರ ಪೆಟ್ರೋಲ್ ಬೆಲೆ 82.03 ರೂಪಾಯಿ ಲೀಟರ್ ಆದ್ರೆ ಡಿಸೇಲ್ ಬೆಲೆ 77.37 ರೂಪಾಯಿ ಲೀಟರ್ ಗೆ ಮಾರಾಟವಾಗಿದೆ.

ಭಾನುವಾರವೂ ಪೆಟ್ರೋಲ್ ಬೆಲೆ 14 ಪೈಸೆ ಏರಿಕೆಯಾಗಿತ್ತು. ಡಿಸೇಲ್ ಬೆಲೆ 0.29 ಪೈಸೆ ಏರಿಕೆ ಕಂಡಿತ್ತು. ಕಳೆದ ಒಂದು ತಿಂಗಳಿಂದ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ನಿರಂತರ ಏರಿಕೆಯಾಗಿರುವುದು ವಾಹನ ಸವಾರರನ್ನು ಸಂಕಷ್ಟಕ್ಕೆ ನೂಕಿದೆ. ವಾಹನ ಸವಾರರಿಗೆ ನೆಮ್ಮದಿ ನೀಡಲು ಕೇಂದ್ರ ಸರ್ಕಾರ ಪೆಟ್ರೋಲ್-ಡಿಸೇಲ್ ಬೆಲೆಯನ್ನು 2.50 ರೂಪಾಯಿ ಇಳಿಕೆ ಮಾಡಿತ್ತು. ಜೊತೆಗೆ ಕೆಲ ರಾಜ್ಯಗಳು ಕೂಡ 2.50 ರೂಪಾಯಿ ಇಳಿಕೆ ಮಾಡಿದ್ದವು. ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 5 ರೂಪಾಯಿ ಇಳಿಕೆ ಕಂಡಿತ್ತು. ಆದ್ರೆ ಕೇಂದ್ರ ಬೆಲೆ ಇಳಿಕೆ ಮಾಡಿದ ಮರುದಿನವೇ ಪೆಟ್ರೋಲ್ ಬೆಲೆ ಮತ್ತೆ ಏರಲು ಶುರುವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಗೆ ಕಾರಣವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...