alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿಯಾಗಲಿವೆ ATM, ಬ್ಯಾಂಕಿಂಗ್ ಸೇವೆ

benk-ddd

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿಯಾದ ಬಳಿಕ ಎ.ಟಿ.ಎಂ., ಬ್ಯಾಂಕಿಂಗ್, ವಿಮಾ ಸೇವೆಗಳು ದುಬಾರಿಯಾಗಲಿವೆ.

ಜಿ.ಎಸ್.ಟಿ.ಯಿಂದಾಗಿ ಕೆಲವು ಸೇವೆ ಮತ್ತು ಸರಕುಗಳು ಕಡಿಮೆಯಾಗಿದ್ದರೆ, ಮತ್ತೆ ಕೆಲವು ದುಬಾರಿಯಾಗಿವೆ. ವಿಮಾ ಸಂಸ್ಥೆಗಳು, ಬ್ಯಾಂಕ್ ಗಳು ಒದಗಿಸುತ್ತಿರುವ ಹಣಕಾಸು ಸೇವೆಗಳಿಗೆ ಪ್ರಸ್ತುತ ಶೇ. 15 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಜಿ.ಎಸ್.ಟಿ. ಜಾರಿಯಾದ ಬಳಿಕ ಶೇ. 18 ರಷ್ಟು ತೆರಿಗೆಯನ್ನು ಪಾವತಿಸಬೇಕಿದೆ.

ಸುಲಭ ಮಾಸಿಕ ಕಂತು(ಇ.ಎಂ.ಐ.), ವಿಮೆ ಪ್ರೀಮಿಯಂ, ಎ.ಟಿ.ಎಂ. ವ್ಯವಹಾರ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಗಳು ಇವೇ ಮೊದಲಾದವು ಶೇ. 3 ರಷ್ಟು ಹೆಚ್ಚಾಗಲಿದೆ.

ಈಗಾಗಲೇ ಬ್ಯಾಂಕ್ ಮತ್ತು ವಿಮಾ ಸಂಸ್ಥೆಗಳು ಶುಲ್ಕ ಏರಿಕೆಯಾಗಲಿರುವ ಮಾಹಿತಿಯನ್ನು ಗ್ರಾಹಕರಿಗೆ ತಿಳಿಸುತ್ತಿವೆ. ಜುಲೈ 1 ರಿಂದ ವಿಮೆ, ಬ್ಯಾಂಕಿಂಗ್ ಸೇವೆಗಳು ದುಬಾರಿಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...