alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋಗೆ ಸೆಡ್ಡು ಹೊಡೆಯೋಕೆ ಏರ್ಟೆಲ್ ಮಾಡಿದೆ ಹೊಸ ಪ್ಲಾನ್

ದೇಶದಲ್ಲಿ ಸದ್ಯ ಇಂಟರ್ನೆಟ್ ಕ್ಷೇತ್ರದಲ್ಲಿ ಮಿಂಚು ಹರಿಸ್ತಿರೋ ರಿಲಯನ್ಸ್ ಜಿಯೋ ಇತರೆ ದೂರ ಸಂಪರ್ಕ ಸೇವಾ ಸಂಸ್ಥೆಗಳ ವ್ಯಾಪಾರಕ್ಕೆ ಭಾರೀ ಪೆಟ್ಟು ನೀಡಿದೆ. ಅಂತಾರಾಷ್ಟ್ರೀಯ ಕಂಪನಿಗಳಾದ ಏರ್ಟೆಲ್ ಮತ್ತು ವೊಡಾಫೋನ್ ಕೂಡ ಜಿಯೋ ಹೊಡೆತವನ್ನ ತಡೆದುಕೊಳ್ಳೋಕೆ ತಡಬಡಾಯಿಸುತ್ತಿವೆ. ಅಂತಾದ್ರಲ್ಲಿ ಈಗ ಜಿಯೋಗೆ ಟಾಂಗ್ ನೀಡುವಂತಾ ಪ್ಲಾನ್ ಒಂದನ್ನ ಏರ್ಟೆಲ್ ಜಾರಿಗೆ ತರೋದಕ್ಕೆ ನಿರ್ಧರಿಸಿದೆ. ಆ ಪ್ರಕಾರ ಜಿಯೋಗಿಂತ ಮೊದಲೇ ಏರ್ಟೆಲ್ ನ ವಿ ಫೈಬರ್ ನ ಅತ್ಯುತ್ತಮ ಪ್ಲಾನ್ ಲಾಂಚ್ ಆಗ್ತಿದೆ.

ಮನೆ ಮತ್ತು ಕಚೇರಿಗಳಿಗೆ ಇಂಟರ್ನೆಟ್ ಮತ್ತು ಬ್ರಾಡ್ ಬ್ಯಾಂಡ್ ಸೇವೆ ಒದಗಿಸುವ ವಿ ಫೈಬರ್ ಪ್ಲಾನ್ ಏರ್ಟೆಲ್ನಲ್ಲಿ ಕೆಲ ವರ್ಷಗಳ ಹಿಂದಿನಿಂದಲೇ ಜಾರಿಯಲ್ಲಿದೆ. ಈಗ ಅದೇ ಪ್ಲಾನ್ ನ್ನ ಜಿಯೋಗೆ ಸೆಡ್ಡುಹೊಡೆಯೋಕೆ ಹೊಸ ರೂಪದಲ್ಲಿ ಜಾರಿಗೊಳಿಸಲಾಗುತ್ತಿದೆ. 1000 ಎಂಬಿಪಿಎಸ್ ಸಾಮರ್ಥ್ಯದ ವಿ ಫೈಬರ್ ಪ್ಲಾನ್ನಲ್ಲಿ ಹಲವು ನವೀನ ಸಾಧನಗಳನ್ನ ಏರ್ಟೆಲ್ ನೀಡುತ್ತಿದೆ. ಇದರಿಂದ ಹೈಸ್ಪೀಡ್ ಇಂಟರ್ನೆಟ್ ಸೇವೆಯನ್ನ ಬಳಕೆದಾರರು ಪಡೆಯಬಹುದಾಗಿದೆ.

ಸದ್ಯ ದೇಶದ 30 ನಗರಗಳಲ್ಲಿ ಏರ್ಟೆಲ್ ವಿ ಫೈಬರ್ ನ ಸೇವೆ ಲಭ್ಯವಿದೆ. ಸದ್ಯ ವಿಫೈಬರ್ನ ಸಂಪೂರ್ಣ ಸೇವೆ ತಮಿಳುನಾಡಿನಲ್ಲಿ ಮಾತ್ರ ಲಭ್ಯವಿದೆ. ಈ ಪ್ಲಾನ್ ಈಗ ದೇಶದ 87 ನಗರಗಳಲ್ಲಿ ಜಾರಿಗೊಳಿಸೋದಕ್ಕೆ ಏರ್ಟೆಲ್ ಚಿಂತನೆ ನಡೆಸಿದೆ. ಇದಕ್ಕಾಗಿ ಟೈರ್ 2 ಮತ್ತು ಟೈರ್ 3 ನಗರಗಳು ಎಂಬ ಎರಡು ಪಟ್ಟಿಯನ್ನ ಏರ್ಟೆಲ್ ಸಿದ್ಧಪಡಿಸಿದೆ. ವಿ ಫೈಬರ್ ಡೇಟಾ ಪ್ಲಾನ್ ಪಡೆದ ಗ್ರಾಹಕರಿಗೆ ಸ್ವಾಗತ ಸೇವೆಯ ಹೆಸರಿನಲ್ಲಿ ಮೂರು ತಿಂಗಳುಗಳ ಕಾಲ ಉಚಿತ ಡೇಟಾ ಸಿಗಲಿದೆ. ಏರ್ಟೆಲ್ ನ ಇತರೆ ಗ್ರಾಹಕರು ಕೂಡ ವಿ ಫೈಬರ್ ಪ್ಲಾನ್ ನ್ನು ಪಡೆಯಬಹುದಾಗಿದೆ. ಏರ್ಟೆಲ್ನಿಂದ ಮೂರು ತಿಂಗಳ ಕಾಲ ಯಾವುದೇ ನೆಟ್ವರ್ಕ್ಗೆ ಉಚಿತ ಕರೆಗಳು, ಹೈಸ್ಪೀಡ್ ಇಂಟರ್ನೆಟ್, ಹೆಚ್ಡಿ ವಿಡಿಯೋ, ಉಚಿತ ಫೈಲ್ ಡೌನ್ಲೋಡಿಂಗ್ ಸೇವೆಯನ್ನ ಪಡೆಯಬಹುದಾಗಿದೆ.

ಹೊಸ ಗ್ರಾಹಕರು ವಿಫೈಬರ್ ಮೋಡಮ್ ಪಡೆಯಬೇಕಾದ ಅಗತ್ಯವಿದ್ದರೆ ಹಳೆಯ ಗ್ರಾಹಕರು ತಮ್ಮ ಮೋಡಮ್ ನ್ ಅಪ್ಗ್ರೇಡ್ ಮಾಡಿಕೊಳ್ಳಬೇಕಿದೆ. ಹೊಸ ಮೋಡಮ್ಗೆ ಏರ್ಟೆಲ್ 1000 ರುಪಾಯಿ ಶುಲ್ಕ ವಿಧಿಸಲಿದೆ. 999 ರೂಪಾಯಿಯಿಂದ ಶುರುವಾಗುವ ವಿ ಫೈಬರ್ ಪ್ಲಾನ್ 4999ರೂಪಾಯಿಯವರೆಗೂ ಇದೆ. 50 ಜಿಬಿ ಡೇಟಾದಿಂದ 1000 ಜಿಬಿ ಡೇಟಾವರೆಗಿನ ಸಂಪೂರ್ಣ ಪ್ಲಾನ್ ಇನ್ನು ಕೆಲವೇ ದಿನದಲ್ಲಿ ಜಾರಿಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...