alex Certify
ಕನ್ನಡ ದುನಿಯಾ       Mobile App
       

Kannada Duniya

1.4 ಮಿಲಿಯನ್ ಕಾರುಗಳನ್ನು ವಾಪಸ್ ಪಡೆಯುತ್ತಿದೆ ಫೋರ್ಡ್, ಕಾರಣ?

ನಿಮ್ಮ ಬಳಿ ಫೋರ್ಡ್ ಕಾರಿದ್ಯಾ? ಹಾಗಿದ್ರೆ ಈ ಸುದ್ದಿಯನ್ನು ನೀವು ಓದಲೇಬೇಕು. ಫೋರ್ಡ್ ಕಾರುಗಳ ಸ್ಟೇರಿಂಗ್ ವ್ಹೀಲ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಡ್ರೈವಿಂಗ್ ಮಾಡುವಾಗ ಸ್ಟೇರಿಂಗ್ ವ್ಹೀಲ್ ಕಿತ್ತು ಕೈಗೆ ಬರುತ್ತಿದೆಯಂತೆ. ಹಾಗಾಗಿ ಫೋರ್ಡ್ ಕಂಪನಿ ಒಟ್ಟು 1.4 ಮಿಲಿಯನ್ ಕಾರುಗಳನ್ನು ವಾಪಸ್ ಪಡೆಯುತ್ತಿದೆ.

ಸ್ಟೇರಿಂಗ್ ಸಮಸ್ಯೆಯಿಂದಾಗಿ ಈಗಾಗ್ಲೇ ಎರಡು ಫೋರ್ಡ್ ಕಾರುಗಳು ಅಪಘಾತಕ್ಕೀಡಾಗಿವೆ. ಓರ್ವನಿಗೆ ಗಾಯವೂ ಆಗಿತ್ತು. 2014-2018ರವರೆಗಿನ ಫೋರ್ಡ್ ಫ್ಯೂಶನ್ ಹಾಗೂ Lincoln MKZ ಮಾಡೆಲ್ ನ ಕಾರುಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ.

ಫ್ಯೂಶನ್ ಎಸ್, ಫ್ಯೂಶನ್ ಎಸ್ಇ, ಹೈಬ್ರಿಡ್ ಎಸ್, ಹೈಬ್ರಿಡ್ ಎಸ್ ಇ, ಹೈಬ್ರಿಡ್ ಟೈಟಾನಿಯಂ, ಎನರ್ಜಿ ಎಸ್ಇ, ಎನರ್ಜಿ ಟೈಟಾನಿಯಂ, ಫ್ಯೂಶನ್ ಸ್ಪೋರ್ಟ್, ಫ್ಯೂಶನ್ ಪ್ಲಾಟಿನಂ, ಫ್ಯೂಶನ್ ಹೈಬ್ರಿಡ್ ಪ್ಲಾಟಿನಂ, ಫ್ಯೂಶನ್ ಎನರ್ಜಿ ಪ್ಲಾಟಿನಂ, Lincoln MKZ Premier, Lincoln MKZ Hybrid Premier, Lincoln MKZ Black Label ಕಾರುಗಳನ್ನು ವಾಪಸ್ ಪಡೆಯಲಾಗ್ತಿದೆ.

ಕ್ಲಚ್ ಪ್ರೆಶರ್ ಪ್ಲೇಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಫ್ಯೂಶನ್ ಹಾಗೂ ಫೋಕಸ್ ಮಾಡೆಲ್ ನ 6000 ಕಾರುಗಳನ್ನು ಸಹ ಫೋರ್ಡ್ ಕಂಪನಿ ವಾಪಸ್ ಪಡೆದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...