alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಪಟ್ಟಿಯಲ್ಲೂ ಮೊದಲಿದ್ದಾರೆ ಮುಖೇಶ್ ಅಂಬಾನಿ

ಫೋರ್ಬ್ಸ್ ಮ್ಯಾಗಜೀನ್ ಭಾರತದ 100 ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2017ರ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಅವ್ರ ಆಸ್ತಿ ಸುಮಾರು 38 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಈ ಪಟ್ಟಿಯಲ್ಲಿ ವಿಪ್ರೋ ಅಧ್ಯಕ್ಷ ಅಜೀಮ್ ಪ್ರೇಮ್ ಜಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಹಿಂದೂಜಾ ಸಹೋದರರು ಸ್ಥಾನ ಪಡೆದಿದ್ದಾರೆ.

ಅಜೀಮ್ ಪ್ರೇಮ್ಜಿ ಸಂಪತ್ತು 19 ಬಿಲಿಯನ್ ಡಾಲರ್ ಆದ್ರೆ ಹಿಂದೂಜಾ ಸಹೋದರರ ಸಂಪತ್ತು 18.4 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

ಫೋರ್ಬ್ಸ್ ಮ್ಯಾಗಜೀನ್ ಶ್ರೀಮಂತರ ಪಟ್ಟಿ :

ಮುಖೇಶ್ ಅಂಬಾನಿ (ರಿಲಾಯನ್ಸ್ ಇಂಡಸ್ಟ್ರೀಸ್) -38 ಬಿಲಿಯನ್ ಡಾಲರ್

ಅಜೀಮ್ ಪ್ರೇಮ್ಜಿ (ವಿಪ್ರೋ) -19 ಬಿಲಿಯನ್ ಡಾಲರ್

ಹಿಂದೂಜಾ ಸಹೋದರರು (ಅಶೋಕ್ ಲೇಲ್ಯಾಂಡ್) -18.4 ಬಿಲಿಯನ್ ಡಾಲರ್

ಲಕ್ಷ್ಮಿ ಮಿತ್ತಲ್ (ಅರ್ಸೆಲರ್ ಮಿತ್ತಲ್) -16.5 ಬಿಲಿಯನ್ ಡಾಲರ್

ಶ್ರೀಮಂತ ಮಹಿಳೆಯರ ಬಗ್ಗೆ ಹೇಳೋದಾದ್ರೆ ಜಿಂದಾಲ್ ಗ್ರೂಪ್ ನ ಮುಖ್ಯಸ್ಥೆ ಸಾವಿತ್ರಿ ಜಿಂದಾಲ್ ಮೊದಲ ಸ್ಥಾನದಲ್ಲಿದ್ದಾರೆ. 67 ವರ್ಷದ ಸಾವಿತ್ರಿ ಜಿಂದಾಲ್ ಆಸ್ತಿ 7.5 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...