alex Certify ‘ಎಟಿಎಂ’ ವ್ಯವಹಾರ ಸೇಫಾಗಿರಲು ತಪ್ಪದೆ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಎಟಿಎಂ’ ವ್ಯವಹಾರ ಸೇಫಾಗಿರಲು ತಪ್ಪದೆ ಮಾಡಿ ಈ ಕೆಲಸ

ಆನ್ ಲೈನ್ ಮೂಲಕ ವಹಿವಾಟು ಹೆಚ್ಚಾದಂತೆ ವಂಚನೆ ಪ್ರಕರಣಗಳೂ ಜಾಸ್ತಿಯಾಗ್ತಿವೆ. ನಿಮ್ಮ ಎಟಿಎಂ ಕಾರ್ಡ್ ನಿಂದ ಹಣ ಕಳುವಾಗದೇ ಇರುವಂತೆ ಸುರಕ್ಷಿತ ವ್ಯವಹಾರ ನಡೆಸೋದು ಹೇಗೆ ಅನ್ನೋದನ್ನು ನಾವ್ ಹೇಳ್ತಿವಿ. ಅದಕ್ಕೆ ಸಿಂಪಲ್ ಟಿಪ್ಸ್ ಇಲ್ಲಿದೆ.

ನಿಮ್ಮ ಹಣಕಾಸು ವ್ಯವಹಾರಗಳ ಬಗ್ಗೆ ಎಸ್ಎಂಎಸ್ ಮತ್ತು ಇಮೇಲ್ ಅಲರ್ಟ್ ನಿಮ್ಮ ಮೊಬೈಲ್ ಗೆ ಬರುವಂತೆ ಮಾಡಿಕೊಳ್ಳಿ. ಆಗ ನಿಮ್ಮ ಖಾತೆಯಿಂದೇನಾದ್ರೂ ಹಣ ವಿತ್ ಡ್ರಾ ಮಾಡಿದಲ್ಲಿ ತಕ್ಷಣ ನಿಮಗೆ ಮೆಸೇಜ್ ಬರುತ್ತದೆ.

ನಿಮ್ಮ ಬ್ಯಾಂಕ್ ಸ್ಟೇಟ್ ಮೆಂಟ್ ಗಳನ್ನು ಪರೀಕ್ಷಿಸಿ.

ಆಗಾಗ ನಿಮ್ಮ ಪಾಸ್ ವರ್ಡ್ ಅನ್ನು ಅಪ್ ಡೇಟ್ ಮಾಡುತ್ತಿರಿ. ಆ್ಯಂಟಿ ವೈರಸ್ ಸಾಫ್ಟ್ ವೇರ್ ಬಳಸಿ, ಅದನ್ನೂ ಅಪ್ ಡೇಟ್ ಮಾಡಲು ಮರೆಯಬೇಡಿ.

ಭ್ರದತಾ ಸಿಬ್ಬಂದಿ ಇಲ್ಲದ ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡುವ ಮುನ್ನ ಎಚ್ಚರ.

ಒಂದೇ ಬಾರಿ ದೊಡ್ಡ ಮೊತ್ತದ ವಹಿವಾಟು ತಪ್ಪಿಸಲು ನಿಮ್ಮ ನಿತ್ಯದ ವಹಿವಾಟನ್ನು ಕೊಂಚ ಹೆಚ್ಚಿಸಿಕೊಳ್ಳಿ.

ಬೇರೆ ಬೇರೆ ಬ್ಯಾಂಕ್ ಗಳ ಎಟಿಎಂ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ನಿಮ್ಮ ಖಾತೆ ಇರುವ ಬ್ಯಾಂಕ್ ಎಟಿಎಂಗಳನ್ನೇ ನೆಚ್ಚಿಕೊಳ್ಳಿ.

ನಿಮ್ಮ ಎಟಿಎಂ ಕಾರ್ಡ್ ಕಳೆದು ಹೋಗಿದ್ದರೆ ಅಥವಾ ಕಳುವಾಗಿದ್ದರೆ ಕೂಡಲೇ ಬ್ಯಾಂಕಿಗೆ ಮಾಹಿತಿ ನೀಡಿ.

ಎಟಿಎಂ ಕಾರ್ಡ್ ಬಳಸುವಾಗ ಅಪರಿಚಿತರಿಂದ ಸಹಾಯ ಪಡೆಯಬೇಡಿ.

ನಿಮ್ಮ ಎಟಿಎಂನಲ್ಲಿ ಚೆಕ್ ಅಥವಾ ಕಾರ್ಡ್ ಡೆಪಾಸಿಟ್ ಮಾಡಿದಲ್ಲಿ, ಎರಡು ದಿನಗಳ ಬಳಿಕ ಕ್ರೆಡಿಟ್ ಎಂಟ್ರಿಯನ್ನು ಪರೀಕ್ಷಿಸಿಕೊಳ್ಳಿ.

ಎಟಿಎಂನಿಂದ ಹೊರಹೋಗುವ ಮುನ್ನ ಕ್ಯಾನ್ಸಲ್ ಬಟನ್ ಒತ್ತಲು ಮರೆಯಬೇಡಿ, ನಿಮ್ಮ ಎಟಿಎಂ ಕಾರ್ಡ್ ಅನ್ನು ಕೂಡ ತೆಗೆದುಕೊಳ್ಳಿ.

ಎಟಿಎಂನಲ್ಲಿ ನಿಮ್ಮ ಕಾರ್ಡ್ ಸಿಕ್ಕಿಹಾಕಿಕೊಂಡಿದ್ದಲ್ಲಿ ಅಥವಾ ಹಣ ಬರದೇ ಇದ್ದಲ್ಲಿ ಕೂಡಲೇ ಬ್ಯಾಂಕ್ ಗೆ ತಿಳಿಸಿ.

ಎಟಿಎಂನ ಸನಿಹದಲ್ಲಿ ನಿಂತು ಯಾರ ಕಣ್ಣಿಗೂ ಬೀಳದ ರೀತಿಯಲ್ಲಿ ನಿಮ್ಮ ಎಟಿಎಂ ಪಿನ್ ನಂಬರ್ ಅನ್ನು ನಮೂದಿಸಿ.

ಎಟಿಎಂನಲ್ಲಿ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸುವಲ್ಲಿ ಸಮಸ್ಯೆಯಾದರೆ ಬ್ಯಾಂಕಿಗೆ ಮಾಹಿತಿ ನೀಡಿ.

ಎಟಿಎಂ ಕಾರ್ಡ್ ನಿಮ್ಮ ವೈಯಕ್ತಿಕ ಬಳಕೆಗೆ ಇರುವಂಥದ್ದು. ಪಿನ್ ನಂಬರ್ ಅನ್ನು ಯಾರಿಗೂ ಹೇಳಬೇಡಿ. ನಿಮ್ಮ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಕೂಡ ಹೇಳುವುದು ಸೇಫ್ ಅಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...