alex Certify
ಕನ್ನಡ ದುನಿಯಾ       Mobile App
       

Kannada Duniya

ಕಡಿಮೆ ಖರ್ಚಿನಲ್ಲಿ ಲಕ್ಷಾಂತರ ರೂ. ಗಳಿಸ್ತಾರೆ ಈ ವ್ಯಾಪಾರಿಗಳು

ಪ್ರೇಮಿಗಳ ದಿನದಂದು ಹೂಗಳ ವ್ಯಾಪಾರ ಜೋರಾಗಿಯೇ ಇರುತ್ತೆ. ಪ್ರೀತಿ ಪಾತ್ರರಿಗೆ ಗುಲಾಬಿ ಸೇರಿದಂತೆ ಮೆಚ್ಚಿನ ಹೂಗಳನ್ನು ನೀಡಿ ಪ್ರೀತಿ ನಿವೇದನೆ ಮಾಡ್ತಾರೆ ಪ್ರೇಮಿಗಳು. ಪ್ರೇಮಿಗಳ ದಿನವೊಂದೇ ಅಲ್ಲ ರೋಸ್ ಡೇ, ವಿಶೇಷ ಹಬ್ಬ, ಹರಿದಿನಗಳಲ್ಲಿ ಹೂವಿನ ವ್ಯಾಪಾರ ಜೋರಾಗಿಯೇ ಇರುತ್ತದೆ.

ವಿಶೇಷ ಸಂದರ್ಭಗಳಲ್ಲಿ 25-50 ರೂಪಾಯಿ ನೀಡಿ ನಾವು ಹೂ ಖರೀದಿ ಮಾಡಿದ್ರೆ ಅದ್ರಲ್ಲಿ ಬೆಳೆಗಾರನಿಗೆ ಸಿಗೋದು 50 ಪೈಸೆಯಿಂದ 2 ರೂಪಾಯಿ ಮಾತ್ರ. ಯಸ್, ಆಶ್ಚರ್ಯವಾದ್ರೂ ಇದು ಸತ್ಯ. ಸಾಮಾನ್ಯವಾಗಿ ಸಣ್ಣ ಬೆಳೆಗಾರರು ಒಂದೊಂದೇ ಹೂ ಬಿಡಿಸಿ ಮಾರಾಟ ಮಾಡುವುದಿಲ್ಲ. ವ್ಯಾಪಾರಿಗಳಿಗೆ ಹೂ ಬೆಳೆದ ಜಾಗವನ್ನು ಗುತ್ತಿಗೆ ನೀಡ್ತಾರೆ.

ವ್ಯಾಪಾರಿಗಳು ಆಧುನಿಕ ತಂತ್ರಜ್ಞಾನ ಬಳಸಿ ಹೂ ಬಿಡಿಸಿ, ಅದನ್ನು ಪ್ಯಾಕ್ ಮಾಡಿ ಅಂಗಡಿಯವರಿಗೆ ಮಾರಾಟ ಮಾಡ್ತಾರೆ. ಸಾರಿಗೆಯಿಂದ ಹಿಡಿದು ಹೂ ರಕ್ಷಣೆಯ ಎಲ್ಲ ಕೆಲಸಕ್ಕೂ ಎಸಿ ಬಳಸಲಾಗುತ್ತದೆ. ಸಣ್ಣ ರೈತರ ಬಳಿ ಆಧುನಿಕ ಸೌಲಭ್ಯಗಳ ಕೊರತೆ ಇರುವುದ್ರಿಂದ ಅವರು ದೊಡ್ಡ ರೈತರು ಅಥವಾ ವ್ಯಾಪಾರಿಗಳಿಗೆ ಗುತ್ತಿಗೆ ನೀಡ್ತಾರೆ.

ಈ ವ್ಯಾಪಾರದಲ್ಲಿ ಹೂವಿನ ಅಂಗಡಿ ಮಾಲೀಕರು ಅತಿ ಹೆಚ್ಚು ಲಾಭ ಪಡೆಯುತ್ತಾರಂತೆ. ಶೇಕಡಾ 40ರಷ್ಟು ಲಾಭ ಅವರಿಗಂತೆ. ಹೂ ಹಾಳಾದಲ್ಲಿ ಮಾತ್ರ ಅವರಿಗೆ ನಷ್ಟವಾಗುತ್ತದೆಯೇ ಹೊರತು ಉಳಿದ ಸಮಯದಲ್ಲಿ ಅತಿ ಹೆಚ್ಚು ಲಾಭ ಪಡೆಯುವವರು ಅಂಗಡಿಯವರು ಎನ್ನುತ್ತಾರೆ ವ್ಯಾಪಾರಿಗಳು.

ಸಣ್ಣ ಹೂ ವ್ಯಾಪಾರಿಗಳು ದಿನಕ್ಕೆ ಕಡಿಮೆಯೆಂದ್ರೂ ಸಾವಿರ ರೂಪಾಯಿ ಗಳಿಸ್ತಾರಂತೆ. ದೊಡ್ಡ ವ್ಯಾಪಾರಿಗಳ ಮಾರ್ಜಿನ್ ಜಾಸ್ತಿ. ಇದೇ ಕಾರಣಕ್ಕೆ ಹೂ ಅಂಗಡಿ ವ್ಯಾಪಾರಕ್ಕೆ ಅನೇಕರು ಕಾಲಿಡುತ್ತಿದ್ದಾರಂತೆ. ದೀಪಾವಳಿ ನಂತ್ರ ವ್ಯಾಲಂಟೈನ್ಸ್ ಡೇ ವರೆಗೆ ಹೂವಿನ ವ್ಯಾಪಾರ ಭರ್ಜರಿಯಾಗಿರುತ್ತದೆ ಎನ್ನುತ್ತಾರೆ ವ್ಯಾಪಾರಸ್ಥರು.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...