alex Certify
ಕನ್ನಡ ದುನಿಯಾ       Mobile App
       

Kannada Duniya

ಹಣ ಪಾವತಿ ಮಾಡದೆ ಶಾಪಿಂಗ್ ಮಾಡುವ ಅವಕಾಶ ನೀಡ್ತಿದೆ ಫ್ಲಿಪ್ಕಾರ್ಟ್

ಭಾರತದ ಪ್ರಸಿದ್ಧ ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಗ್ರಾಹಕರಿಗೆ ಕಾರ್ಡ್ ರಹಿತ ಕ್ರೆಡಿಟ್ ಸೌಲಭ್ಯವನ್ನು ನೀಡ್ತಿದೆ. ಇದಕ್ಕೂ ಮೊದಲೇ ಅಮೆಜಾನ್ ಇಂಡಿಯಾ ಇಎಂಐ ಕ್ರೆಡಿಟ್ ಶುರು ಮಾಡಿದೆ. ಅಮೆಜಾನ್ ನಂತ್ರ ಫ್ಲಿಪ್ಕಾರ್ಟ್ ಕೂಡ ಗ್ರಾಹಕರ ಅನುಕೂಲಕ್ಕೆ ಕಾರ್ಡ್ ರಹಿತ ಕ್ರೆಡಿಟ್ ಸೌಲಭ್ಯ ನೀಡಲಿದೆ.

ಕಾರ್ಡ್ ರಹಿತ ಕ್ರೆಡಿಟ್ ಗ್ರಾಹಕರಿಗೆ ಫ್ಲಿಪ್ಕಾರ್ಟ್ 60,000 ರೂಪಾಯಿ ಕ್ರೆಡಿಟ್ ಸೌಲಭ್ಯ ನೀಡಲಿದೆ. ಮಹತ್ವದ ವಿಷ್ಯವೆಂದ್ರೆ ಕಾರ್ಡ್ ರಹಿತ ಕ್ರೆಡಿಟ್ ಸೌಲಭ್ಯ ಪಡೆಯುವ ಗ್ರಾಹಕರು ಯಾವುದೇ ಬಡ್ಡಿ ನೀಡಬೇಕಾಗಿಲ್ಲ. ಕ್ರೆಡಿಟ್ ಕಾರ್ಡ್ ಇಲ್ಲದ ಗ್ರಾಹಕರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಫ್ಲಿಪ್ಕಾರ್ಟ್ ಈ ಸೌಲಭ್ಯ ನೀಡ್ತಿದೆ.

ಫ್ಲಿಪ್ಕಾರ್ಟ್ ಈ ವಿಶಿಷ್ಟ್ಯ ಸೌಲಭ್ಯವನ್ನು ಯಾರು ಬೇಕಾದ್ರೂ ಪಡೆಯಬಹುದಾಗಿದೆ. ಗ್ರಾಹಕರು ಫ್ಲಿಪ್ಕಾರ್ಟ್ ನಲ್ಲಿ ವಸ್ತು ಖರೀದಿ ಮಾಡಿದ ನಂತ್ರ ಎರಡು ಆಯ್ಕೆ ಸಿಗಲಿದೆ. ಒಂದು ತಿಂಗಳೊಳಗೆ ಹಣ ಪಾವತಿ ಆಯ್ಕೆ ಒಂದಾದ್ರೆ 3ರಿಂದ 12 ತಿಂಗಳೊಳಗೆ ಇಎಂಐ ಪಾವತಿ ಮಾಡುವ ಇನ್ನೊಂದು ಆಯ್ಕೆಯಿರಲಿದೆ. 60 ಸಾವಿರದವರೆಗೆ ಸಾಲ ಪಡೆದು ಶಾಪಿಂಗ್ ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...