alex Certify
ಕನ್ನಡ ದುನಿಯಾ       Mobile App
       

Kannada Duniya

ಹಳೆ ವಸ್ತುಗಳನ್ನು ಮಾರಾಟ ಮಾಡಲಿದೆ ಫ್ಲಿಪ್ಕಾರ್ಟ್

ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಸೆಕೆಂಡ್ ಹ್ಯಾಂಡ್ ಸಾಮಗ್ರಿಗಳನ್ನೂ ಇನ್ಮುಂದೆ ಮಾರಾಟ ಮಾಡಲಿದೆ. ಇದಕ್ಕಾಗಿ ಫ್ಲಿಪ್ಕಾರ್ಟ್ ಪ್ರೇತ್ಯಕ ವೇದಿಕೆ 2GUD ಶುರು ಮಾಡಿದೆ. ಇಲ್ಲಿ ಸ್ಮಾರ್ಟ್ಫೋನ್, ಲ್ಯಾಪ್ಟಾಪ್, ಟ್ಯಾಬ್ಲೆಟ್ ಹಾಗೂ ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಮಾರಾಟ ಮಾಡಬಹುದಾಗಿದೆ.

ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರನ್ನು ಗಮನದಲ್ಲಿಟ್ಟುಕೊಂಡು ಫ್ಲಿಪ್ಕಾರ್ಟ್ 2GUD ವೇದಿಕೆ ಶುರು ಮಾಡಿದೆ. ಸ್ಮಾರ್ಟ್ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡಲು ಮನಸ್ಸಿರುತ್ತದೆ. ಆದ್ರೆ ಹಣದ ಸಮಸ್ಯೆಯಿರುತ್ತದೆ. ಅಂತವರು ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಇದ್ರಲ್ಲಿ ಖರೀದಿಸಬಹುದಾಗಿದೆ.

2GUD ಮೊಬೈಲ್ ಆ್ಯಪ್ ಆಗಿದ್ದು, ಶೀಘ್ರವೇ ಕಂಪನಿ ವೆಬ್ಸೈಟ್ ಶುರು ಮಾಡಲಿದೆ. ಇಲ್ಲಿ ಮಾರಾಟವಾಗುವ ಉತ್ಪನ್ನಗಳು 3 ರಿಂದ 12 ತಿಂಗಳ ವಾರಂಟಿ ಹೊಂದಿರಲಿವೆ. ವಸ್ತುಗಳು ಹಾಳಾಗಿದ್ದರೆ ಕಂಪನಿ ಅದನ್ನು ರಿಪೇರಿ ಮಾಡಲಿದೆ. 2gud.com ನಲ್ಲಿ ಲ್ಯಾಪ್ ಟಾಪ್ ಬೆಲೆ 10 ಸಾವಿರದಿಂದ ಶುರುವಾಗಲಿದೆ. ಟ್ಯಾಬ್ಲೆಟ್ ಬೆಲೆ 9,099 ರೂಪಾಯಿಯಿಂದ ಶುರುವಾಗಲಿದೆ. ಕಂಪನಿ Google Pixel XLನ್ನು 31,599 ರೂಪಾಯಿಗೆ ಮಾರಾಟ ಮಾಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...