alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಲಿಪ್‍ ಕಾರ್ಟ್ ಗ್ರೂಪ್ ಸಿಇಒ ರಾಜೀನಾಮೆ

ಫ್ಲಿಪ್‍ಕಾರ್ಟ್ ಸಮೂಹದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಬಿನ್ನಿ ಬನ್ಸಾಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ವಿರುದ್ಧ ಗಂಭೀರವಾದ ವೈಯಕ್ತಿಕ ದುರ್ವರ್ತನೆ ಆರೋಪ ಬಂದಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ.

ಬಿನ್ನಿ ಬನ್ಸಾಲ್ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ. ಅದಾಗ್ಯೂ ತನಿಖೆ ನಡೆಸಬೇಕಾದ್ದು ನಮ್ಮ ಕರ್ತವ್ಯ. ಪ್ರಕರಣ ಸಂಬಂಧ ಸ್ವತಂತ್ರ ತನಿಖೆ ನಡೆಯುತ್ತಿದೆ. ದೂರುದಾರರು ಸೂಕ್ತ ಸಾಕ್ಷ್ಯಗಳನ್ನು ನೀಡದಿದ್ದರೂ ಬನ್ಸಾಲ್ ಅವರ ಸಮರ್ಥನೆ ಸಮಂಜಸವಾಗಿರದ ಕಾರಣ ರಾಜೀನಾಮೆ ಸ್ವೀಕರಿಸಲಾಗಿದೆ ಎಂದು ವಾಲ್‍ ಮಾರ್ಟ್ ಇಂಕ್ ಕಂಪನಿ ತಿಳಿಸಿದೆ.

ಫ್ಲಿಪ್‍ ಕಾರ್ಟ್ ಸಿಇಒ ಆಗಿ ಕಲ್ಯಾಣ್ ಕೃಷ್ಣಮೂರ್ತಿ ಮುಂದುವರಿಯಲಿದ್ದಾರೆ. ಮಿಂತ್ರಾ ಹಾಗೂ ಜಬಾಂಗ್‍ ಗೆ ಅನಂತ್‍ನಾರಾಯಣ್ ಸಿಇಒ ಆಗಿ ಮುಂದುವರಿಯಲಿದ್ದು, ಅವರು ಕಲ್ಯಾಣ್ ಕೃಷ್ಣಮೂರ್ತಿಗೆ ವರದಿ ಮಾಡಿಕೊಳ್ಳಲಿದ್ದಾರೆ ಎಂದಿರುವ ವಾಲ್‍ ಮಾರ್ಟ್, ಬಿನ್ನಿ ಬನ್ಸಾಲ್ ವಿರುದ್ಧದ ಆರೋಪವೇನು ಎಂಬುದನ್ನು ತಿಳಿಸಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...