alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರನ್ನು ಸೆಳೆಯಲು ಫ್ಲಿಪ್ ಕಾರ್ಟ್ ಹೊಸ ಪ್ಲಾನ್…! 

ಫ್ಲಿಪ್ ಕಾರ್ಟ್ ಹೊಸ ವ್ಯವಸ್ಥೆಯನ್ನು ಗ್ರಾಹಕರಿಗೆ ನೀಡಿದೆ. ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಸುಮಾರು 60 ಸಾವಿರ ರೂಪಾಯಿವರೆಗೂ ವಸ್ತುಗಳನ್ನು ಖರೀದಿಸಲು ಸಾಲ ನೀಡಲು ಮುಂದಾಗಿದೆ.

ಫ್ಲಿಪ್ ಕಾರ್ಟ್ ಗ್ರಾಹಕರನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳಲು ಹೊಸ ಪ್ಲಾನ್ ಮಾಡಿಕೊಂಡಿದೆ. ಅದರ ಅನುಸಾರ 3 ತಿಂಗಳಿನಿಂದ 12 ತಿಂಗಳೊಳಗೆ ಇಎಮ್ಐ ಕಟ್ಟಬಹುದಾಗಿದೆ. ಗ್ರಾಹಕ ಈ ಯೋಜನೆಯ ಲಾಭ ಪಡೆಯಲು ಫ್ಲಿಪ್ ಕಾರ್ಟ್ ನಲ್ಲಿ ಲಾಗ್ ಇನ್ ಮಾಡಬೇಕು. ಲೋನ್ ಪಡೆಯಲು ಬೇಕಾದ ಮಾಹಿತಿ ತುಂಬ ಬೇಕು. ನೀವು ಫ್ಲಿಪ್ ಕಾರ್ಟ್ ನಲ್ಲಿ ಈ ಹಿಂದೆ ಖರೀದಿಸಿದ ಮೌಲ್ಯಗಳ ಆಧಾರದ ಮೇಲೆ ನಿಮಗೆ ಸುಮಾರು 60 ಸಾವಿರ ರೂಪಾಯಿ ಲೋನ್ ಸಿಗಲಿದೆ.

ಈ ಲೋನ್ ಹಣವನ್ನು ನೀವು ತುಂಬಲು ಸಂಸ್ಥೆ ಎರಡು ರೀತಿಯ ಅವಕಾಶ ನೀಡಿದೆ. ನೀವು ವಸ್ತು ಖರೀದಿಸಿದ ಬಳಿಕ, ಮುಂದಿನ ತಿಂಗಳಲ್ಲಿ ಹಣ ಪಾವತಿಸುವುದು. ಇಲ್ಲ, 3 ರಿಂದ 12 ತಿಂಗಳ ಕಾಲಾವಕಾಶ ಪಡೆಯಬಹುದಾಗಿದೆ.

ಕ್ರೆಡಿಟ್ ಕಾರ್ಡ್ ಇಲ್ಲದೇ ಇರೋ ಗ್ರಾಹಕರ ಸಮಸ್ಯೆಯನ್ನು ಅರಿತು ಸಂಸ್ಥೆ ಈ ಹೊಸ ಯೋಜನೆ ಘೋಷಿಸಿದೆ. ಈ ಮೂಲಕ ಗ್ರಾಹಕ 60 ಸಾವಿರದವರೆಗಿನ ವಸ್ತುಗಳನ್ನು ಫ್ಲಿಪ್ ಕಾರ್ಟ್ ನಲ್ಲಿ ಕೊಳ್ಳಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...