alex Certify
ಕನ್ನಡ ದುನಿಯಾ       Mobile App
       

Kannada Duniya

ಐಫೋನ್ ನಿರೀಕ್ಷೆಯಲ್ಲಿದ್ದ ಟೆಕ್ಕಿಗೆ ಬಂದಿದ್ದೇನು ಗೊತ್ತಾ…?

ಆನ್ ಲೈನ್ ನಲ್ಲಿ ಐಫೋನ್ 8 ಬುಕ್ ಮಾಡಿ ಅದಕ್ಕೆ ಸಂಪೂರ್ಣ ಹಣವನ್ನೂ ಪಾವತಿಸಿದ್ದ ಟೆಕ್ಕಿಯೊಬ್ಬರಿಗೆ ಪಾರ್ಸೆಲ್ ನಲ್ಲಿ ಬಂದ ವಸ್ತು ಕಂಡು ಶಾಕ್ ಆಗಿದೆ. ಇದೀಗ ಟೆಕ್ಕಿ ಈ ಕುರಿತು ಪ್ರಕರಣ ದಾಖಲಿಸಿದ್ದಾರೆ.

ಮುಂಬೈನಲ್ಲಿ ಈ ಘಟನೆ ನಡೆದಿದ್ದು, 26 ವರ್ಷದ ಟೆಕ್ಕಿ ತಬ್ರೇಜ್ ಮೆಹಬೂಬ್ ನಗ್ರೇಲ್ ಎಂಬವರು ಆನ್ ಲೈನ್ ಶಾಪಿಂಗ್ ತಾಣ ಫ್ಲಿಪ್ ಕಾರ್ಟ್ ನಲ್ಲಿ ಐಫೋನ್ 8 ಬುಕ್ ಮಾಡಿ ಇದಕ್ಕಾಗಿ 55 ಸಾವಿರ ರೂ. ಗಳನ್ನು ಪಾವತಿಸಿದ್ದರು.

ಜನವರಿ 22 ರಂದು ಅವರಿಗೆ ಪಾರ್ಸೆಲ್ ಬಂದಿದ್ದು, ಅದನ್ನು ಬಿಚ್ಚಿ ನೋಡಿದ ತಬ್ರೇಜ್ ಶಾಕ್ ಗೊಳಗಾಗಿದ್ದಾರೆ. ಐಫೋನ್ ಬದಲಿಗೆ ಸೋಪ್ ಇಡಲಾಗಿತ್ತು. ಈ ಕುರಿತು ಫ್ಲಿಪ್ ಕಾರ್ಟ್ ಪ್ರತಿನಿಧಿಗಳ ಜೊತೆ ಮಾತನಾಡಿದರೂ ಪ್ರಯೋಜನವಾಗದ ಕಾರಣ ವಂಚನೆಗೊಳಗಾದ ಟೆಕ್ಕಿ ಈಗ ಪೊಲೀಸರ ಮೊರೆ ಹೋಗಿದ್ದಾರೆ. ಬೈಕುಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಇದರ ಮಧ್ಯೆ ಫ್ಲಿಪ್ ಕಾರ್ಟ್, ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...