alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಜೆ 4ರಿಂದ ಫ್ಲಿಪ್ಕಾರ್ಟ್ ಸೇಲ್: ಈ ಸ್ಮಾರ್ಟ್ಫೋನ್ ಗಳ ಮೇಲೆ ಭರ್ಜರಿ ಆಫರ್

ಅಮೆರಿಕಾ ಇ-ಕಾಮರ್ಸ್ ಕಂಪನಿ ಅಮೆಜಾನ್ ನ ಫ್ರೈಂ ಸೇಲ್ ಗೆ ಟಕ್ಕರ್ ನೀಡಲು ಭಾರತೀಯ ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಮುಂದಾಗಿದೆ. ಫ್ಲಿಪ್ಕಾರ್ಟ್ ಮೂರು ದಿನಗಳ ಶಾಪಿಂಗ್ ಡೇ ಘೋಷಣೆ ಮಾಡಿದೆ. ಸದ್ಯ ಅಮೆರಿಕಾ ರಿಟೇಲ್ ಕಂಪನಿ ವಾಲ್ಮಾರ್ಟ್ ಫ್ಲಿಪ್ಕಾರ್ಟ್ ನ್ನೂ  ಖರೀದಿ ಮಾಡಿದೆ.

ಅಮೆಜಾನ್ ಪ್ರೈಂ ಸೇಲ್ ಜುಲೈ 16 ರ ಮಧ್ಯಾಹ್ನ 12 ಗಂಟೆಯಿಂದ ಶುರುವಾಗಿದೆ. ಫ್ಲಿಪ್ಕಾರ್ಟ್ ಸೇಲ್ ಜುಲೈ 16 ರ ಸಂಜೆ ನಾಲ್ಕು ಗಂಟೆಗೆ ಶುರುವಾಗ್ತಿದೆ. ಈ ಸೇಲ್ ಜುಲೈ 19 ರವರೆಗೆ ನಡೆಯಲಿದೆ. ಸೇಲ್ ನಲ್ಲಿ ಸ್ಮಾರ್ಟ್ಫೋನ್ ನಿಂದ ಹಿಡಿದು ಲ್ಯಾಪ್ ಟಾಪ್, ಟ್ಯಾಬ್ಲೆಟ್ ಸೇರಿದಂತೆ ವಿದ್ಯುನ್ಮಾನ ಉತ್ಪನ್ನಗಳು ಸಿಗಲಿವೆ.

ಐಫೋನ್ ಎಕ್ಸ್, ಗೂಗ್ಲಿ ಪಿಕ್ಸೆಲ್ 2 ವಿವೋ ವಿ7 ಪ್ಲಸ್, ಐಫೋನ್ 6ಎಸ್, ಐಫೋನ್ ಎಸ್ಇ, ರೆಡ್ಮಿ 5ಎ, ರೆಡ್ ಮಿ ನೋಟ್ 5 ಪ್ರೋ, Honor 10, Zenfone Z5 ಜೊತೆಗೆ ಬಜೆಟ್ ಸ್ಮಾರ್ಟ್ಫೋನ್ ಗಳಿಗೂ ಫ್ಲಿಪ್ಕಾರ್ಟ್ ಆಫರ್ ನೀಡ್ತಿದೆ. ವಿನಿಮಯ ಆಫರ್ ಕೂಡ ಫ್ಲಿಪ್ಕಾರ್ಟ್ ನೀಡ್ತಿದೆ. ಫ್ಲಿಪ್ಕಾರ್ಟ್ ಈ ಸೇಲ್ ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಶೇಕಡಾ 70ರಷ್ಟು ರಿಯಾಯಿತಿ ನೀಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...