alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 9999 ರೂ.ಗೆ ಸಿಗ್ತಿದೆ 32 ಇಂಚಿನ ಸ್ಮಾರ್ಟ್ ಟಿವಿ

ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ ಡಿಸೆಂಬರ್ 31ರ ಕೊನೆಯ ದಿನದಂದು ಅತಿ ದೊಡ್ಡ ಟಿವಿ ಸೇಲ್ ಶುರು ಮಾಡ್ತಿದೆ. ಈ ಆಫರ್ CloudWalker ಕಂಪನಿ ಟಿವಿ ಮೇಲೆ ಮಾತ್ರ ಸಿಗ್ತಿದೆ. ಈ ಕಂಪನಿಯ 11 ಮಾಡೆಲ್ ಟಿವಿ ಮೇಲೆ ರಿಯಾಯಿತಿ ಸಿಗ್ತಿದೆ.

ಈ ಆಫರ್ ನಲ್ಲಿ 32 ಇಂಚಿನ ದೊಡ್ಡ ಸ್ಮಾರ್ಟ್ ಟಿವಿ ಕೇವಲ 9999 ರೂಪಾಯಿಗೆ ಸಿಗ್ತಿದೆ. ಈ ಟಿವಿ ಎಂ ಆರ್ ಪಿ 18000 ರೂಪಾಯಿಯಾಗಿದ್ದು, ಕೇವಲ ಡಿಸೆಂಬರ್ 31 ರಂದು ಈ ಟಿವಿ ಮೇಲೆ 8 ಸಾವಿರ ರೂಪಾಯಿ ರಿಯಾಯಿತಿ ಸಿಗ್ತಿದೆ. ಕಂಪನಿ ಇಎಂಐ ಸೌಲಭ್ಯವನ್ನು ನೀಡ್ತಿದೆ. ಐಸಿಐಸಿಐ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಈ ಸೌಲಭ್ಯ ಸಿಗ್ತಿದೆ.

CloudWalker ನ ಎಲ್ಲ 11 ಟಿವಿ ಸ್ಮಾರ್ಟ್ ಟಿವಿಯಾಗಿದೆ. ಇದ್ರಲ್ಲಿ ಆನ್ಲೈನ್ ಸೌಲಭ್ಯವಿದೆ. ಟಿವಿಯಲ್ಲಿಯೇ ಯೂಟ್ಯೂಬ್ ನೋಡಬಹುದಾಗಿದೆ. ಫ್ಲಿಪ್ಕಾರ್ಟ್ ಈ ಸೇಲ್ ಇಂದು 12 ಗಂಟೆಯಿಂದ ಶುರುವಾಗಲಿದೆ. ಎಷ್ಟು ಗಂಟೆಯವರೆಗೆ ಸೇಲ್ ನಡೆಯಲಿದೆ ಎನ್ನುವ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...