alex Certify
ಕನ್ನಡ ದುನಿಯಾ       Mobile App
       

Kannada Duniya

ಜಾರ್ಖಂಡ್ ನಲ್ಲಿ ಆರಂಭಗೊಳ್ಳಲಿದೆ ಖಾದಿ ಮಾಲ್

ಜಾರ್ಖಂಡ್ ಕೈಮಗ್ಗದ ನೇಕಾರರು ಮತ್ತು ಖಾದಿ ಉತ್ಪನ್ನ ತಯಾರಕರಿಗೆ ಸೂಕ್ತ ಪ್ರೋತ್ಸಾಹ ನೀಡಲು ಜಾರ್ಖಂಡ್ ಸರ್ಕಾರ ಮುಂದಾಗಿದೆ.

ಜಾರ್ಖಂಡ್ ಖಾದಿ ಬೋರ್ಡ್ನ ಕರಿಗಾರ್ ಪಂಚಾಯತ್ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ರಘುಬರ್ ದಾಸ್ ಹೆವಿ ಎಂಜಿನಿಯರಿಂಗ್ ಕ್ಯಾಂಪಸ್ನ ಲ್ಲಿ ಖಾದಿಮಾಲ್ ಆರಂಭಕ್ಕೆ ಸ್ಥಳಾವಕಾಶ ನೀಡಲು ಒಪ್ಪಿಕೊಂಡಿದ್ದಾರೆ.

ಇನ್ನು 15 ದಿನಗಳಲ್ಲಿ ಈ ಕಾಮಗಾರಿ ಶುರುವಾಗಲಿದೆ. ಅಂದಹಾಗೆ ಇದು ದೇಶದ ಪ್ರಪ್ರಥಮ ಖಾದಿ ಮಾಲ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಜಾರ್ಖಂಡ್ನಲ್ಲಿ 1ಲಕ್ಷ 13 ಸಾವಿರ ನೊಂದಾಯಿತ ಕುಶಲ ಕರ್ಮಿಗಳ ವರ್ಗ ಇದೆ. ಅವರಿಗೆ ಸೂಕ್ತ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ . ಖಾದಿ ಉತ್ಪನ್ನ ತಯಾರಕರು ಸೇರಿದಂತೆ ಕುಶಲ ಕರ್ಮಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಖಾದಿ ಮಾಲ್ ಕಟ್ಟೋದಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಮಾಲ್ ನಿರ್ಮಾಣವಾದ ಬಳಿಕ ಅಲ್ಲಿ ಅವರಿಗೆ ವ್ಯಾಪಾರ ಮಳಿಗೆಗಳನ್ನ ಸರ್ಕಾರ ನೀಡಲಿದೆ.

ತಂತ್ರಜ್ಞಾನ ಮತ್ತು ಮಾರುಕಟ್ಟೆ ನಿಯಮಗಳನ್ನ ಬಳಸಿಕೊಂಡೇ ಕುಶಲ ಕರ್ಮಿಗಳು ಬದುಕು ಹಸನು ಮಾಡಿಕೊಳ್ಳಬೇಕು ಅಂತ ಮುಖ್ಯಮಂತ್ರಿ ರಘುಬರ್ ದಾಸ್ ತಿಳಿಸಿದ್ದಾರೆ. ಆ ನಿಟ್ಟಿನಲ್ಲಿ ಸರ್ಕಾರ ವೇದಿಕೆ ಕಲ್ಪಿಸುತ್ತಿದ್ದು ಇದರಿಂದ ಜಾರ್ಖಂಡ್ನ ಪ್ರವಾಸೋದ್ಯಮ ಅಭಿವೃದ್ಧಿಯೂ ಸಾಧ್ಯ ಅಂತ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...