alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನ ಖರೀದಿಸಬೇಕೆಂದಿದ್ದವರಿಗೆ ‘ಶಾಕ್’: ವಿಮೆ ಕಂತಿನಲ್ಲಿ ಭಾರೀ ಹೆಚ್ಚಳ

ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಯಿಂದ ಈಗಾಗಲೇ ಕಂಗೆಟ್ಟಿರುವ ಜೊತೆ ನೂತನ ವಾಹನ ಖರೀದಿ ಮಾಡುವವರಿಗೆ ವಿಮಾ ನಿಯಂತ್ರಣಾ ಹಾಗೂ ಅಭಿವೃದ್ಧಿ ಪ್ರಾಧಿಕಾರ ಶಾಕ್ ನೀಡಿದ್ದು, 1500 ಸಿಸಿಗಿಂತ ಮೇಲ್ಪಟ್ಟ ವಾಹನಗಳ ಮೊದಲ ವರ್ಷದ ವಿಮೆಯನ್ನು 24 ಸಾವಿರ ರೂಪಾಯಿಗೆ ಏರಿಕೆ ಮಾಡಿದೆ.

ಕೇಂದ್ರ ವಿಮಾ ನಿಯಂತ್ರಣಾ ಹಾಗೂ ಅಭಿವೃದ್ಧಿ ಪ್ರಾಧಿಕಾರದ ನೂತನ ನಿಯಮದಿಂದ ಮೊದಲ ವರ್ಷ ವಿಮಾ ಕಂತಿನಲ್ಲಿ ಈ ಏರಿಕೆಯಾಗಿದ್ದು, ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದರೊಂದಿಗೆ ಇಲ್ಲಿಯವರೆಗೆ ಇದ್ದ ವಾರ್ಷಿಕ ವಿಮಾ ಕಂತು ಬದಲಿಗೆ, ದ್ವಿಚಕ್ರ ವಾಹನ ಸವಾರರು ಐದು ವರ್ಷದ ಹಾಗೂ ನಾಲ್ಕು ಚಕ್ರ ವಾಹನ ಖರೀದಿ ಮಾಡುವವರು ಮೂರು ವರ್ಷದ ಥರ್ಡ್ ಪಾರ್ಟಿ ಪ್ರೀಮಿಯಂನ್ನು ಒಟ್ಟಿಗೆ ಕಟ್ಟಬೇಕೆಂದು ನಿಯಮದಲ್ಲಿ ಬದಲಾವಣೆ ತಂದಿದೆ.

ಆದರೆ ಸ್ವಂತ ಹಾನಿ ಪ್ರೀಮಿಯಂನ್ನು ಒಟ್ಟಿಗೆ ಅಥವಾ ವರ್ಷಕ್ಕೊಮ್ಮೆ ಕಟ್ಟುವ ಅವಕಾಶ ನೀಡಿದ್ದು, ಸಾವಿರ ಸಿಸಿ ಒಳಗಿನ ವಾಹನಗಳಿಗೆ ವರ್ಷಕ್ಕೆ 17,132 ರೂಪಾಯಿ ಕಟ್ಟಬೇಕೆಂದು ತಿಳಿಸಿದೆ. ಈ ಹಿಂದೆ ಇದರ ಮೊತ್ತ 10,541 ರೂಪಾಯಿ ನಿಗದಿಪಡಿಸಲಾಗಿತ್ತು.

ಆದರೆ ಸ್ವಂತ ವಾಹನ ಚಾಲಕರಿಗೆ ನೂತನ ನಿಯಮ ಕೆಲವು ಸವಲತ್ತು ನೀಡಿದ್ದು, ಚಾಲನೆ ವೇಳೆ ಅಪಘಾತವಾದರೆ ಈ ಹಿಂದೆ ಎರಡು ಲಕ್ಷವಿದ್ದ ಪರಿಹಾರ ಮೊತ್ತವನ್ನು 15 ಲಕ್ಷಕ್ಕೆ ಏರಿಸಿದ್ದು, ದ್ವಿಚಕ್ರ ಸವಾರರಿಗೆ ಒಂದು ಲಕ್ಷದಿಂದ ಎರಡು ಲಕ್ಷಕ್ಕೆ ಏರಿಸಿದೆ. ಆದರೆ ಬಾಡಿಗೆ ವಾಹನದ ಚಾಲಕರಿಗೆ ಎರಡು ಲಕ್ಷ ರೂಪಾಯಿ ಪರಿಹಾರವನ್ನು ನೀಡಲು ನಿರ್ಧರಿಸಿದೆ. ಈ ಪರಿಹಾರವನ್ನು ಬಳಸಿಕೊಳ್ಳಲು ವೈಯಕ್ತಿಕ ಅಪಘಾತ ವಿಮೆಗೆ ದ್ವಿಚಕ್ರ ವಾಹನ ಸವಾರರು 50 ರೂಪಾಯಿ ಹಾಗೂ ಕಾರು ಚಾಲಕರು 100 ರೂ. ಕಟ್ಟಬೇಕೆಂದು ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...