alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್….ಮಲ್ಯ ಪಡೆದ ಸಾಲಕ್ಕೆ ದಾಖಲೆಯೇ ಇಲ್ಲ…!

ಉದ್ಯಮಿ ವಿಜಯ್ ಮಲ್ಯಗೆ ವಿವಿಧ ಬ್ಯಾಂಕ್ ಗಳು ಸಾಲ ನೀಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಅಂತಾ ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತ ಪ್ರಶ್ನೆಗೆ ಸಂಸತ್ತಿನಲ್ಲಿ 2017ರ ಮಾರ್ಚ್ 17ರಂದು ಹಣಕಾಸು ಖಾತೆಯ ರಾಜ್ಯ ಸಚಿವ ಸಂತೋಷ್ ಗಂಗಾವರ್ ಉತ್ತರಿಸಿದ್ದರು.

2004ರಲ್ಲಿ ಮಲ್ಯಗೆ ಸಾಲ ಕೊಡಲಾಗಿತ್ತು, 2008ರಲ್ಲಿ ಅದನ್ನು ಪರಿಶೀಲಿಸಲಾಗಿದೆ. 2009ರಲ್ಲಿ 8040 ಕೋಟಿ ಸಾಲವನ್ನು ಎನ್ ಪಿ ಎ ಎಂದು ಘೋಷಿಸಲಾಗಿದೆ. ಪಿಎಸ್ಬಿ ವರದಿಯ ಪ್ರಕಾರ ಮಲ್ಯ ಆಸ್ತಿಯನ್ನು ಹರಾಜು ಹಾಕಿ 155 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ ಅಂತಾ ತಿಳಿಸಿದ್ದರು.

ಆದ್ರೆ ಎನ್ ಡಿ ಎ ಸರ್ಕಾರದಿಂದ ಮಲ್ಯ ಪಡೆದ ಸಾಲದ ಬಗ್ಗೆ ಸಂಪೂರ್ಣ ವಿವರ ಲಭ್ಯವಾಗಿಲ್ಲ. ಹಾಗಾಗಿ CIC ಗೆ ಅರ್ಜಿ ಸಲ್ಲಿಸಲಾಗಿತ್ತು. ಆರ್ ಟಿ ಐ ಅರ್ಜಿಗೆ ಪ್ರತಿಕ್ರಿಯಿಸಿದ CIC, ಮಲ್ಯ ಸಾಲದ ವಿವರ ಕೊಡಲು ಸಾಧ್ಯವಿಲ್ಲ ಎಂದಿದೆ. ಅಷ್ಟೇ ಅಲ್ಲ ಮಲ್ಯ ಪಡೆದಿರೋ ಸಾಲದ ಬಗ್ಗೆ ಹಣಕಾಸು ಸಚಿವಾಲಯದ ಬಳಿಯೇ ದಾಖಲೆಗಳಿಲ್ಲ ಅಂತಾ ಹೇಳಿರೋದು ಅಚ್ಚರಿ ತಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...