alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ 4ಜಿ ಕುರಿತ ಕುತೂಹಲಗಳಿಗೆ ಬೀಳಲಿದೆ ತೆರೆ

reliancejio789ಮೊಬೈಲ್ ಗ್ರಾಹಕರು ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ರಿಲಾಯನ್ಸ್ ಜಿಯೋ 4 ಜಿ ಇಂದು ಲಾಂಚ್ ಆಗಲಿದೆ ಎಂದು ಹೇಳಲಾಗಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ವಾರ್ಷಿಕ ಸಾಮಾನ್ಯ ಸಭೆ ಇಂದು ನಡೆಯಲಿದ್ದು, ಈ ವೇಳೆ ಚೇರ್ಮನ್ ಮುಕೇಶ್ ಅಂಬಾನಿ, ಈ ಕುರಿತು ಘೋಷಣೆ ಮಾಡಲಿದ್ದಾರೆನ್ನಲಾಗಿದೆ.

ರಿಲಾಯನ್ಸ್ ಜಿಯೋ 90 ದಿನಗಳ ಕಾಲ ಉಚಿತ ಡೇಟಾ, ಕಾಲ್ ಸೌಲಭ್ಯ ನೀಡುತ್ತಿರುವುದರಿಂದ ಇದಕ್ಕೆ ಸ್ಪರ್ಧೆಯೊಡ್ಡಲು ಇತರೆ ಮೊಬೈಲ್ ಸೇವಾ ಕಂಪನಿಗಳು ಪೈಪೋಟಿಗೆ ಬಿದ್ದು ಡೇಟಾ ಪ್ಯಾಕ್ ದರಗಳನ್ನು ಕಡಿತಗೊಳಿಸಿದ್ದು, ರಿಲಾಯನ್ಸ್ 4ಜಿ ಇಂದು ಲಾಂಚ್ ಆಗುವ ವೇಳೆ ಮತ್ತಷ್ಟು ಕೊಡುಗೆಗಳನ್ನು ಘೋಷಿಸಿದರೆ ಈ ದರ ಸಮರ ಮತ್ತಷ್ಟು ಕಾಲ ಮುಂದುವರೆಯಲಿದೆ ಎನ್ನಲಾಗಿದೆ.

ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಇಂದಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಕೇಶ್ ಅಂಬಾನಿಯವರು, ರಿಲಾಯನ್ಸ್ ಜಿಯೋ 4 ಜಿ ಯ 90 ದಿನಗಳ ಕಾಲದ ಉಚಿತ ಬಳಕೆ ಬಳಿಕದ ಟಾರಿಫ್ ದರಗಳನ್ನು ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಮಾಧ್ಯಮಗಳಲ್ಲಿ ಟಾರಿಫ್ ವಿವರಗಳು ಈಗಾಗಲೇ ಲೀಕ್ ಆಗಿದ್ದು, ಇದು ಇಷ್ಟರ ಮಟ್ಟಿಗೆ ನಿಜ ಎಂಬುದು ಬಳಿಕ ಗೊತ್ತಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...