alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ 100 ರೂಪಾಯಿ ನೋಟಿನಲ್ಲಿದೆ ಒಂದು ವಿಶೇಷ…!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರದಂದು ಮಹಾತ್ಮಗಾಂಧಿ ಸರಣಿಯ 100 ರೂ. ಮುಖಬೆಲೆಯ ಹೊಸ ನೋಟುಗಳನ್ನ ಬಿಡುಗಡೆಗೊಳಿಸಿದೆ. ಸ್ವಚ್ಚ ಭಾರತ್ ಅಭಿಯಾನದ ಹಿನ್ನಲೆಯಲ್ಲಿ ಲ್ಯಾವೆಂಡರ್ ಬಣ್ಣದಲ್ಲಿ ಬಿಡುಗಡೆಯಾಗಿರುವ ಹೊಸ ನೋಟುಗಳು ಮತ್ತೊಂದು ಹೆಗ್ಗಳಿಕೆಗೂ ಪಾತ್ರವಾಗಿದೆ. 100 ರೂಪಾಯಿಯ ಈ ಹೊಸ ನೋಟುಗಳು ಮೊದಲ ಮೇಡ್ ಇನ್ ಇಂಡಿಯಾ ನೋಟುಗಳಾಗಿವೆ.

ನೋಟುಗಳ ತಯಾರಿಗೆ ಬೇಕಾಗುವ ಪ್ರತಿಯೊಂದು ವಸ್ತುಗಳನ್ನು ಸ್ವದೇಶಿ ಕಂಪನಿಗಳಿಂದ ಬಳಸಿಕೊಳ್ಳಲಾಗಿದೆ. ನೋಟಿನ ವಿನ್ಯಾಸ ಮತ್ತು ಅದಕ್ಕೆ ಬಳಸಲಾದ ಕಾಗದ ಭಾರತದಲ್ಲೇ ತಯಾರಾದಂತದ್ದು. ನೋಟಿಗೆ ಬಳಸಲಾಗಿರೋ ಇಂಕ್ ಕೂಡ ಭಾರತೀಯ ಕಂಪನಿಯದ್ದೇ. ನೋಟಿನಲ್ಲಿರುವ ಭದ್ರತಾ ಫೀಚರ್ಸ್ ಗಳನ್ನ ಭಾರತೀಯ ಕಂಪನಿಗಳೇ ಡಿಸೈನ್ ಮಾಡಿವೆ. ನೋಟಿನ ವಿನ್ಯಾಸವನ್ನು ತಯಾರು ಮಾಡಿದ್ದು, ಮೈಸೂರಿನಲ್ಲಿರುವ ಭಾರತೀಯ ನೋಟು ಮುದ್ರಣಾಲಯದ ಸ್ಡುಡಿಯೋ.

ಹಳೆಯ ನೋಟುಗಳಿಗಿಂತಲೂ ವಿಭಿನ್ನವಾಗಿದ್ದು ಎಟಿಎಂ ಗಳಿಗೆ ಈ ನೋಟು ತಲುಪೋಕೆ ಇನ್ನಷ್ಟು ಹೆಚ್ಚಿನ ಸಮಯ ಬೇಕಾಗಲಿದೆ. ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿ ಈ ನೋಟಿನ ಮೇಲಿದೆ. ಲ್ಯಾವೆಂಡರ್ ಬಣ್ಣದಲ್ಲಿರುವ ಈ ನೋಟುಗಳಲ್ಲಿ ಜ್ಯಾಮಿತೀಯ ಆಕಾರದಲ್ಲಿ ಉಳಿದ ವಿನ್ಯಾಸವನ್ನು ಅಳವಡಿಸಲಾಗಿದೆ. ಇಷ್ಟು ದಿನ ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಕನಸು ಕಾಣುತ್ತಿದ್ದ ಭಾರತಕ್ಕೆ 100 ರ ಹೊಸ ನೋಟಿನ ಮೂಲಕ ಆ ಕನಸು ನನಸಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...