alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಪ್ರಯಾಣಿಕರಿಗೆ ಇನ್ಮುಂದೆ ತಪ್ಪಲಿದೆ ಟ್ರಾಫಿಕ್ ಕಿರಿಕಿರಿ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ. ಟ್ರಾಫಿಕ್ ನಲ್ಲಿ ಸಿಲುಕಿ ಸಕಾಲಕ್ಕೆ ನಿಲ್ದಾಣ ತಲುಪಲಾಗದೆ ವಿಮಾನ ಮಿಸ್ ಮಾಡಿಕೊಳ್ಳುವ ಆತಂಕ ಇನ್ಮುಂದೆ ತಪ್ಪಲಿದೆ.

ಕೇರಳ ಮೂಲದ ತುಂಬೇ ಏವಿಯೇಷನ್ ಜೊತೆ ಬಿಐಎಎಲ್ ಒಪ್ಪಂದ ಮಾಡಿಕೊಂಡಿದ್ದು, ಎಲೆಕ್ಟ್ರಾನಿಕ್ ಸಿಟಿ ಫೇಸ್ 1 ಹಾಗೂ ಹೆಚ್ಎಎಲ್ ವಿಮಾನ ನಿಲ್ದಾಣಗಳಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಗಳು ಸಂಚರಿಸಲಿವೆ.

ಹೆಲಿಕಾಪ್ಟರ್ ಗಳು ಪ್ರತಿದಿನ ಬೆಳಿಗ್ಗೆ 6-30 ರಿಂದ 9-30 ರವರೆಗೆ ಮೂರು ರೌಂಡ್ ಟ್ರಿಪ್ ಹಾಗೂ ಸಂಜೆ 3-00 ಗಂಟೆಯಿಂದ 6-15 ರವರೆಗೆ ಮೂರು ರೌಂಡ್ ಟ್ರಿಪ್ ಸಂಚರಿಸಲಿದ್ದು, ಒಂದು ಬಾರಿಗೆ 6 ಮಂದಿ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ.

ಆರಂಭಿಕ ಹಂತದಲ್ಲಿ ಈಗ ನಿಗದಿಪಡಿಸಿರುವ ಸ್ಥಳಗಳಿಂದ ಮಾತ್ರ ಹೆಲಿಕಾಪ್ಟರ್ ಗಳು ಹಾರಾಟ ನಡೆಸಲಿದ್ದು, ಮುಂದಿನ ದಿನಗಳಲ್ಲಿ ನಗರದ ವಿವಿಧ ಭಾಗಗಳಿಗೂ ಇದು ವಿಸ್ತರಣೆಯಾಗಲಿದೆ. ಇನ್ನೊಂದು ವಾರದೊಳಗೆ ಹೆಲಿಕಾಪ್ಟರ್ ಸೇವೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...