alex Certify ಅಂಚೆ ಇಲಾಖೆ ಉಳಿತಾಯ ಖಾತೆ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಚೆ ಇಲಾಖೆ ಉಳಿತಾಯ ಖಾತೆ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಭಾರತೀಯ ಅಂಚೆ ಇಲಾಖೆ ಬ್ಯಾಂಕಿಂಗ್ ಸೇವೆ ಆರಂಭಿಸಿದ್ದು, ಜನ ಸಾಮಾನ್ಯರು ವಿವಿಧ ಸೇವೆಗಳನ್ನು ಪಡೆದುಕೊಳ್ಳಬಹುದು. ಹಣ ವರ್ಗಾವಣೆ, ನೇರ ಪ್ರಯೋಜನ ವರ್ಗಾವಣೆ, ಬಿಲ್ ಪಾವತಿಗಳನ್ನೂ ಮಾಡಬಹುದು.

ಅಂಚೆ ಕಚೇರಿಯ ಬ್ಯಾಂಕಿಂಗ್ ಸೇವೆಯಲ್ಲಿ ಮೂರು ರೀತಿಯ ಉಳಿತಾಯ ಖಾತೆಗಳಿವೆ. “ನಿಯಮಿತ”, “ಡಿಜಿಟಲ್” ಮತ್ತು ”ಬೇಸಿಕ್” ಉಳಿತಾಯ ಖಾತೆ ಎಂದು ವರ್ಗೀಕರಿಸಲಾಗಿದೆ.

ರೆಗ್ಯುಲರ್ (ಸಾಮಾನ್ಯ) ಉಳಿತಾಯ ಖಾತೆ ಆರಂಭಿಸಲು 20 ರೂ. ಇದ್ದರೆ ಸಾಕು. ಜತೆಗೆ ಖಾತೆಯಲ್ಲಿ ಮಾಸಿಕ ಕನಿಷ್ಠ ಹಣ ಇರಲೇಬೇಕೆಂಬ ನಿಯಮವಿಲ್ಲ. 10 ವರ್ಷಕ್ಕಿಂತ ಹೆಚ್ಚಿನವರು ಕೆವೈಸಿಯೊಂದಿಗೆ ಖಾತೆಯಲ್ಲಿ ಅನಿಯಮಿತವಾಗಿ ನಗದು ಜಮಾ ಮಾಡಬಹುದು ಮತ್ತು ಬಿಡಿಕೊಳ್ಳಬಹುದು. ‌

ಈ ಖಾತೆ ನಿರ್ವಹಣೆಗೆ ಕ್ಯೂಆರ್ ಕಾರ್ಡ್ ನೀಡಲಾಗುತ್ತದೆ. ಪ್ರತಿ ಬಾರಿ ಖಾತೆ ನಿರ್ವಹಣೆ ಸಂದರ್ಭದಲ್ಲಿ ಕಾರ್ಡ್ ಸ್ವೈಪ್ ಮಾಡಿ, ಗ್ರಾಹಕನ ಫಿಂಗರ್ ಪ್ರಿಂಟ್ ನೀಡಬೇಕು. ಪ್ರತಿ ದಿನದ ಕೊನೆಯಲ್ಲಿ ಖಾತೆಯಲ್ಲಿ ಗರಿಷ್ಠ 1 ಲಕ್ಷಕ್ಕಿಂತ ಹೆಚ್ಚು ಹಣ ಇಡುವಂತಿಲ್ಲ.

ಬೇಸಿಕ್ ಸೇವಿಂಗ್ ಖಾತೆಯಲ್ಲಿ ಮೇಲಿನ ಎಲ್ಲಾ ಸೇವೆಗಳು ಸಿಗಲಿದೆ. ಆದರೆ ತಿಂಗಳೊಂದರಲ್ಲಿ ನಾಲ್ಕು ಬಾರಿ ಮಾತ್ರ ಹಣ ಬಿಡಿಸಿಕೊಳ್ಳಲು ಅವಕಾಶವಿರಲಿದೆ.

ಡಿಜಿಟಲ್ ಸೇವಿಂಗ್ ಖಾತೆಯನ್ನು ಇಲಾಖೆಯ ಮೊಬೈಲ್ ಆಪ್ ಬಳಸಿ ಸೇವೆ ಪಡೆದುಕೊಳ್ಳಬಹುದು. 18 ವರ್ಷಕ್ಕಿಂತ ಮೇಲ್ಪಟ್ಟವರು ಆಧಾರ್, ಪಾನ್ ಕಾರ್ಡ್ ನೀಡಿ ಆರಂಭಿಸಬಹುದು. ಆದರೆ ವಾರ್ಷಿಕ ಸಂಚಿತ 2 ಲಕ್ಷ ರೂಪಾಯಿವರೆಗೆ ಮಾತ್ರ ಜಮಾ ಮಾಡಬಹುದು. ಆದರೆ ಎಷ್ಟು ಬಾರಿ ಬೇಕಾದರೂ ಖಾತೆ ನಿರ್ವಹಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...