alex Certify
ಕನ್ನಡ ದುನಿಯಾ       Mobile App
       

Kannada Duniya

ವಿಧಾನಸಭೆ ಚುನಾವಣೆ ಮತದಾನಕ್ಕೆ ನೆರವಾಗಲಿದೆ ಫೇಸ್ಬುಕ್

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾಸಭಾ ಚುನಾವಣೆ ಹತ್ತಿರ ಬರ್ತಿದೆ. ರಾಜಕೀಯ ಪಕ್ಷಗಳು ಮತದಾರರನ್ನು ಒಲಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡ್ತಿವೆ. ಮತಪ್ರಚಾರ ಜೋರಾಗಿ ನಡೆದಿದ್ರೂ ಮತದಾನ ಮಾಡುವವರ ಸಂಖ್ಯೆ ಕಡಿಮೆಯಾಗ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ.

ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಫೇಸ್ಬುಕ್ ಮುಂದಾಗಿದೆ. ರಾಜ್ಯ ಚುನಾವಣಾ ಆಯೋಗದ ಜೊತೆ ಫೇಸ್ಬುಕ್ ಮಾತುಕತೆ ನಡೆಸಿದೆ. ಮತದಾನದ ದಿನ ಮತದಾನ ಮಾಡಲು ಜನರನ್ನು ಪ್ರೋತ್ಸಾಹಿಸುವುದು ಫೇಸ್ಬುಕ್ ಉದ್ದೇಶವಾಗಿದೆ. ಫೇಸ್ಬುಕ್ ನ್ಯೂಸ್ ಫೀಡ್ ನಲ್ಲಿ ಮತದಾರರಿಗೆ ಫೇಸ್ಬುಕ್ ಸಂದೇಶ ರವಾನೆ ಮಾಡಲಿದೆ.

ನವೆಂಬರ್ 9, ಡಿಸೆಂಬರ್ 9 ಹಾಗೂ ಡಿಸೆಂಬರ್ 14ರಂದು ಫೇಸ್ಬುಕ್ ಮತದಾನ ಮಾಡುವಂತೆ ನ್ಯೂಸ್ ಫೀಡ್ ನಲ್ಲಿ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಲಿದೆ. ಫೇಸ್ಬುಕ್ ಈ ಕೆಲಸದಿಂದ ಹಿಮಾಚಲ ಪ್ರದೇಶ ಹಾಗೂ ಗುಜರಾತ್ ಮತದಾರರು ಜಾಗೃತರಾಗಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲಿದ್ದಾರೆಂದು ಫೇಸ್ಬುಕ್ ಇಂಡಿಯಾದ ಮುಖ್ಯ ಅಧಿಕಾರಿ ನಿತಿನ್ ಸಲುಜಾ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...