alex Certify
ಕನ್ನಡ ದುನಿಯಾ       Mobile App
       

Kannada Duniya

ಪಾನ್ ಕಾರ್ಡ್ ಮಾಡಿಸಬೇಕೆಂದಿದ್ದೀರಾ? ಹಾಗಾದ್ರೆ ಓದಿ ಈ ಸುದ್ದಿ

ಪಾನ್ ಕಾರ್ಡ್ ನಲ್ಲಿ ವ್ಯಕ್ತಿಯ ತಂದೆ ಹೆಸರನ್ನು ನಮೂದಿಸುವುದು ಕಡ್ಡಾಯ ಎಂಬ ನಿಯಮವನ್ನು ಆದಾಯ ತೆರಿಗೆ ಇಲಾಖೆ ಸಡಿಲಿಸಿದೆ. ಕಾರ್ಡ್ ಹೊಂದುವ ವ್ಯಕ್ತಿಯ ತಾಯಿ ಸಿಂಗಲ್ ಪೇರೆಂಟ್ ಆಗಿದ್ದಲ್ಲಿ, ಕಾರ್ಡ್ ನಲ್ಲಿ ತಂದೆಯ ಹೆಸರು ಕಡ್ಡಾಯವಲ್ಲ. ಅಂಥ ಸಂದರ್ಭಗಳಲ್ಲಿ ತಾಯಿಯ ಹೆಸರನ್ನು ಪರಿಗಣಿಸಲಾಗುತ್ತದೆ ಎಂದು ಇಲಾಖೆ ಹೇಳಿದೆ.

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್(ಸಿಬಿಡಿಟಿ) ಅದಾಯ ತೆರಿಗೆ ಇಲಾಖೆಯ ನಿಯಮಗಳಿಗೆ ತಿದ್ದುಪಡಿ ತಂದಿರುವ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಇದುವರೆಗೂ ತಂದೆಯ ಹೆಸರು ನಮೂದಿಸಬೇಕಾದ್ದು ಕಡ್ಡಾಯವಾಗಿತ್ತು. ಸದ್ಯ ಆ ನಿಯಮಕ್ಕೆ ತಿದ್ದುಪಡಿ ತಂದು ಸಡಿಲಿಕೆ ನೀಡಲಾಗಿದೆ. ಆದರೆ ಈ ತಿದ್ದುಪಡಿ ಡಿಸೆಂಬರ್ 5ರಿಂದ ಜಾರಿಗೆ ಬರಲಿದೆ ಎಂದು ಇಲಾಖೆ ತಿಳಿಸಿದೆ.

ಇನ್ನು, ಒಂದು ಆರ್ಥಿಕ ವರ್ಷದಲ್ಲಿ 2.5 ಲಕ್ಷ ರೂ. ಅಥವಾ ಅದಕ್ಕೂ ಹೆಚ್ಚು ವಹಿವಾಟು ನಡೆಸಿದ ಸಂಸ್ಥೆಗಳು ಪಾನ್ ಕಾರ್ಡ್ ಹೊಂದಿರಬೇಕಾದ್ದು ಕಡ್ಡಾಯ ಎಂದೂ ತಿದ್ದುಪಡಿ ತಂದಿದೆ. ಅಂಥವರು ಮುಂದಿನ ಮೇ ಒಳಗೆ ಅರ್ಜಿ ಸಲ್ಲಿಸಬೇಕು ಎಂದೂ ತಿಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...