alex Certify
ಕನ್ನಡ ದುನಿಯಾ       Mobile App
       

Kannada Duniya

Olx ನಲ್ಲಿ ಮಾರಾಟವಾಗ್ತಿವೆ ಜಾನುವಾರು..!

olx-farmer

Olx ನಂತಹ ಇ-ಕಾಮರ್ಸ್ ವೇದಿಕೆಗಳು ಕೇವಲ ಸಿಟಿ ಜನರಿಗೆ ಸೀಮಿತ ಅಂದ್ಕೋಬೇಡಿ. ಹಳ್ಳಿ ಹೈದರು ಕೂಡ ಈಗ ಫುಲ್ ಹೈಟೆಕ್ ಆಗಿದ್ದಾರೆ. ಇದಕ್ಕೆ ಸಾಕ್ಷಿ ಹರಿಯಾಣದ ಸೋನಿಪತ್ ನ ರೈತ ರಾಕೇಶ್ ಖಾತ್ರಿ. ಇವರು ಹೈನುಗಾರಿಕೆ ಮಾಡಿ ಬದುಕು ಸಾಗಿಸುತ್ತಾರೆ. ಇವರ ಜಾನುವಾರು ಕೊಡು-ಕೊಳ್ಳುವ ವ್ಯವಹಾರವೆಲ್ಲ ನಡೆಯೋದು Olx ನಲ್ಲಿ.

ಇದುವರೆಗೆ ರಾಕೇಶ್ 25 ಹಸು ಮತ್ತು ಎಮ್ಮೆಗಳನ್ನು Olx ಮೂಲಕ ಬೇರೆ ರೈತರಿಗೆ ಮಾರಾಟ ಮಾಡಿದ್ದಾರೆ. Olx ಮೂಲಕ ವ್ಯಾಪಾರ ಮಾಡ್ತಾ ರಾಕೇಶ್ 1 ಲಕ್ಷ ರೂಪಾಯಿಗೂ ಅಧಿಕ ಲಾಭ ಗಳಿಸಿದ್ದಾರೆ. ರಾಕೇಶ್ ಪಿಯುಸಿ ಓದಿದ್ದಾರೆ, ಹಾಗಾಗಿ ಇಂಟರ್ನೆಟ್ ಬಗ್ಗೆ ಅರಿವಿದೆ. ಕಳೆದ 4 ತಿಂಗಳುಗಳಿಂದ Olx ನಲ್ಲಿ ಜಾನುವಾರು ವ್ಯಾಪಾರ ಮಾಡ್ತಿದ್ದಾರೆ.

ಇವರನ್ನು ನೋಡಿ ಉಳಿದ ರೈತರು ಕೂಡ Olx ಮೊರೆ ಹೋಗ್ತಿದ್ದಾರೆ. ಅಶೋಕ್ ಮತ್ತು ಬಾಬು ಎಂಬ ಇಬ್ಬರು ವ್ಯಾಪಾರಿಗಳು ಜಾನುವಾರುಗಳನ್ನು ಕೊಳ್ಳಲು ಊರೂರು ಅಲೆದಿದ್ದರಂತೆ. ಈಗ ಅವರಿಗೂ Olx ಬಳಕೆ ಗೊತ್ತಾಗಿದೆ, ಜಾಹೀರಾತು ನೋಡಿ ಒಳ್ಳೆಯ ತಳಿ ಎನಿಸಿದ್ರೆ Olx ಮೂಲಕವೇ ಖರೀದಿಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...