alex Certify
ಕನ್ನಡ ದುನಿಯಾ       Mobile App
       

Kannada Duniya

ಆಪಲ್ CEO ಸಂಬಳಕ್ಕೆ ಬಿತ್ತು ಕತ್ತರಿ

tim

ಕಳೆದ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆಪಲ್ ಕಂಪನಿಯ ಐಫೋನ್ ಮಾರಾಟದಲ್ಲಿ ಕುಸಿತ ಕಂಡಿದೆ. ಹಾಗಾಗಿ ಆಪಲ್ ಕಂಪನಿಯ ಸಿಇಓ ಟಿಮ್ ಕುಕ್ ಅವರ ವೇತನಲ್ಲಿ ಶೇ.15ರಷ್ಟು ಕಡಿತ ಮಾಡಲಾಗಿದೆ.

ಕಳೆದ ವರ್ಷ ಟಿಮ್ ಕುಕ್ ಒಟ್ಟಾರೆ 10.3 ಮಿಲಿಯನ್ ಡಾಲರ್ ವೇತನ ಪಡೆದಿದ್ರು. ಆದ್ರೆ ಈ ಬಾರಿ ಕೇವಲ 8.7 ಮಿಲಿಯನ್ ಡಾಲರ್ ವೇತನ ನೀಡಲಾಗಿದೆ.

ಕೆಲವು ಎಕ್ಸಿಕ್ಯೂಟಿವ್ ಗಳ ವೇತನಕ್ಕೂ ಕಂಪನಿ ಕತ್ತರಿ ಹಾಕಿದೆ. ಆಪಲ್ ಕಂಪನಿಯ ಆದಾಯ ಶೇ.8 ರಷ್ಟು ಕಡಿಮೆಯಾಗಿದ್ದು, 216 ಬಿಲಿಯನ್ ಡಾಲರ್ ಗೆ ಬಂದು ತಲುಪಿದೆ.

2007 ರ ನಂತರ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಐಫೋನ್ ಗಳು ಸೇಲ್ ಆಗಿವೆ. ಅಷ್ಟೇ ಅಲ್ಲ 2001ರ ನಂತರ ಆಪಲ್ ಆದಾಯ ಕುಸಿತ ಕಂಡಿರೋದು ಕೂಡ ಇದೇ ಮೊದಲ ಬಾರಿ. ಕಳೆದ ವರ್ಷಕ್ಕಿಂತ ಈ ಬಾರಿ ಶೇ.4 ರಷ್ಟು ಆದಾಯ ಖೋತಾ ಆಗಿದೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...