alex Certify
ಕನ್ನಡ ದುನಿಯಾ       Mobile App
       

Kannada Duniya

ಯೂಟ್ಯೂಬ್ ವಿಡಿಯೋದಿಂದ ಕಲ್ಯಾಣ್ ಜುವೆಲ್ಲರ್ಸ್ ಗೆ ಆಗಿರುವ ನಷ್ಟವೆಷ್ಟು ಗೊತ್ತಾ?

ಸಾಮಾಜಿಕ ಜಾಲ ತಾಣ ಯೂಟ್ಯೂಬ್ ನಲ್ಲಿ ಹರಿದಾಡಿದ ನಕಲಿ ಸುದ್ದಿಯೊಂದರ ವಿಡಿಯೋದಿಂದಾಗಿ ದೇಶ-ವಿದೇಶಗಳಲ್ಲಿ ಆಭರಣ ಮಳಿಗೆಗಳನ್ನು ಹೊಂದಿರುವ ಕಲ್ಯಾಣ್ ಜ್ಯುವೆಲ್ಲರ್ಸ್ ಬರೋಬ್ಬರಿ 500 ಕೋಟಿ ರೂಪಾಯಿ ನಷ್ಟ ಅನುಭವಿಸಿದೆಯಂತೆ.

ಈ ಕುರಿತು ಕಲ್ಯಾಣ್ ಜುವೆಲ್ಲರ್ಸ್ ಕೇರಳ ಹೈಕೋರ್ಟ್ ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದು, ಕುವೈತ್ ನಲ್ಲಿ ಇರುವ ನಮ್ಮ ಚಿನ್ನಾಭರಣ ಮಳಿಗೆಯಲ್ಲಿ ಅಧಿಕಾರಿಗಳು ನಡೆಸಿದ ಸಾಮಾನ್ಯ ಪರಿಶೀಲನೆಯನ್ನು ದಾಳಿ ಎಂಬಂತೆ ಬಿಂಬಿಸಿ ಈ ವಿಡಿಯೋವನ್ನು ಮಾಡಲಾಗಿತ್ತು ಎಂದು ಹೇಳಿದೆ.

ಕಲ್ಯಾಣ್ ಜುವೆಲ್ಲರ್ಸ್ ನಲ್ಲಿ ಅಧಿಕಾರಿಗಳು ನಕಲಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಪಪ್ರಚಾರ ನಡೆಸಿ ವಿಡಿಯೋ ಮಾಡಲಾಗಿತ್ತು. ಇದರಿಂದಾಗಿ ಈ ಪ್ರಮಾಣದ ನಷ್ಟ ಉಂಟಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...