alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ವಹಿವಾಟು ವೇಳೆ ಸಮಸ್ಯೆಯಾದ್ರೆ ಎಸ್.ಬಿ.ಐ. ಗ್ರಾಹಕರು ಮಾಡಬೇಕಾದ್ದೇನು…?

ಎಟಿಎಂನಲ್ಲಿ ಹಣ ಹಿಂಪಡೆಯುವಾಗ ಕೆಲವೊಮ್ಮೆ ಸಮಸ್ಯೆಗಳು ಆಗುವುದು ಸಹಜ. ಅಂಥ ಸಂದರ್ಭಗಳಲ್ಲಿ ಇನ್ನು ದೇಶದ ದೊಡ್ಡ ಬ್ಯಾಂಕ್ ಆದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‍.ಬಿ.ಐ.) ಗ್ರಾಹಕರಿಗೆ ಚಿಂತೆ ಇಲ್ಲ. ಏಕೆಂದರೆ ಹಾಗಾದಾಗ ಆನ್‍ ಲೈನ್‍ ನಲ್ಲಿ ದೂರು ನೀಡುವ ವ್ಯವಸ್ಥೆಯನ್ನು ಎಸ್‍.ಬಿ.ಐ. ಜಾರಿಗೆ ತಂದಿದೆ.

ಎಟಿಎಂ ವಹಿವಾಟಿನಲ್ಲಿ ಸಮಸ್ಯೆ ಆದಾಗ, ಕ್ರೆಡಿಟ್-ಡೆಬಿಟ್ ಕಾರ್ಡ್ ಕುರಿತ ತೊಂದರೆಗಳಿದ್ದಲ್ಲಿ ಗ್ರಾಹಕರು ಎಸ್‍.ಬಿ.ಐ. ವೆಬ್‍ಸೈಟ್‍ಗೆ ಹೋಗಿ ಆನ್‍ ಲೈನ್‍ ನಲ್ಲಿ ದೂರು ನೀಡಬಹುದು. ಅದಕ್ಕಾಗಿ ಮಾಡಬೇಕಾದ್ದಿಷ್ಟು. ಎಸ್‍.ಬಿ.ಐ. ವೆಬ್‍ಸೈಟ್ ಲಾಗಿನ್ ಆದರೆ ಅಲ್ಲಿ ಸಿಎಂಎಸ್ ಪೋರ್ಟಲ್ ಕಾಣಿಸುತ್ತದೆ. ಅಲ್ಲಿ ನಿಗದಿತ ಜಾಗದಲ್ಲಿ ಖಾತೆ ಸಂಖ್ಯೆ, ಖಾತೆಯ ವಿಧ, ಬ್ರ್ಯಾಂಚ್ ಕೋಡ್, ಮೊಬೈಲ್ ನಂಬರ್, ಇಮೇಲ್ ಐಡಿ, ಯಾವ ರೀತಿಯ ದೂರು ಇತ್ಯಾದಿ ವಿವರಗಳನ್ನು ನಮೂದಿಸಿ ಸಬ್ಮೀಟ್ ಮಾಡಬೇಕು.

ಸಬ್ಮೀಟ್ ಆಗುತ್ತಿದ್ದಂತೆ ದೂರಿನ ಸಂಖ್ಯೆ ಹಾಗೂ ಸ್ಟೇಟಸ್ ಮಾಹಿತಿಯು ದೂರುದಾರರು ನೀಡಿದ ಇಮೇಲ್ ಐಡಿ ಹಾಗೂ ಮೊಬೈಲ್‍ಗೆ ಬರುತ್ತದೆ. 7 ದಿನಗಳ ಒಳಗೆ ದೂರಿನ ವಿಲೇವಾರಿ ಆಗಲಿದ್ದು, ಈ ಮಧ್ಯೆ ಸಿಎಂಎಸ್ ಪೋರ್ಟಲ್‍ಗೆ ಹೋಗಿ ದೂರಿನ ಸ್ಟೇಟಸ್ ಗಮನಿಸಬಹುದು. ಅದಾಗ್ಯೂ ದೂರು ಇತ್ಯರ್ಥವಾಗದಿದ್ದಲ್ಲಿ ಬ್ಯಾಂಕ್ ಒಂಬುಡ್ಸ್‍ಮನ್‍ಗೆ ಆನ್‍ ಲೈನ್‍ ನಲ್ಲೇ ದೂರು ಸಲ್ಲಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...