alex Certify
ಕನ್ನಡ ದುನಿಯಾ       Mobile App
       

Kannada Duniya

‘ಫೇಸ್ ಬುಕ್’ ಬಳಸುವವರಿಗೊಂದು ಶಾಕಿಂಗ್ ಸುದ್ದಿ

facebook_416x416

ಆಧುನಿಕತೆ ಹೆಚ್ಚಿದಂತೆಲ್ಲಾ ಸೌಲಭ್ಯ, ಸೌಕರ್ಯಗಳು ಹೆಚ್ಚಾಗಿದೆ. ಅದರಂತೆ ಬಹುತೇಕರು ಕಂಪ್ಯೂಟರ್, ಸ್ಮಾರ್ಟ್ ಫೋನ್ ಬಳಸುತ್ತಾರೆ. ಅದರಲ್ಲಿಯೂ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಅನಿವಾರ್ಯ ಎನ್ನುವಂತಾಗಿದೆ. ಫೇಸ್ ಬುಕ್ ನಲ್ಲಿ ನಿಮ್ಮ ನಡುವೆ ಚರ್ಚೆಯಾಗುವ ಮಾಹಿತಿ ಕೂಡ ಮಾರಾಟದ ಸರಕು ಎಂದರೆ ನಂಬುತ್ತೀರಾ…?

ಹೌದು, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಚಾಟಿಂಗ್ ಮಾಡುವಾಗ ನಡೆಯುವ ಸಂಗತಿಗಳನ್ನು ಫೇಸ್ ಬುಕ್ ಮಾರಾಟ ಮಾಡುತ್ತದೆ ಎನ್ನಲಾಗಿದೆ. ಫೇಸ್ ಬುಕ್, ವಿವಿಧ ಥರ್ಡ್ ಪಾರ್ಟಿ ಕಂಪನಿಗಳಿಗೆ ಫೇಸ್ ಬುಕ್ ಚಾಟಿಂಗ್ ನಲ್ಲಿ ಯಾವ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತದೆ. ವಿವಿಧ ಕಂಪನಿಗಳ ಉತ್ಪನ್ನಗಳು, ಟಿವಿ ಶೋ, ಕಾರ್ಯಕ್ರಮ ಮತ್ತಿತರ ವಿಷಯಗಳ ಬಗ್ಗೆ ಚರ್ಚೆಯ ಸಂದರ್ಭದಲ್ಲಿ ಜನರಿಗೆ ಯಾವುದು ಇಷ್ಟ, ಯಾವುದು ಇಷ್ಟವಾಗುವುದಿಲ್ಲ ಎಂಬೆಲ್ಲಾ ಸಂಗತಿಗಳನ್ನು ಕಂಪನಿಗಳಿಗೆ ಒದಗಿಸುತ್ತದೆ ಎಂದು ಹೇಳಲಾಗಿದೆ.

ಫೇಸ್ ಬುಕ್ ಬಳಕೆದಾರರು ಚಾಟಿಂಗ್ ನಲ್ಲಿ ಯಾವ ವಿಷಯ, ಉತ್ಪನ್ನಗಳ ಬಗ್ಗೆ ಹೆಚ್ಚು ಚರ್ಚಿಸುತ್ತಾರೆ ಎಂಬ ಮಾಹಿತಿಯನ್ನು ಥರ್ಡ್ ಪಾರ್ಟಿ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ. ಆದರೆ, ವೈಯಕ್ತಿಕ ಮಾಹಿತಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಲಾಗಿದೆ. ಅಲ್ಲದೇ, ಸಂಸ್ಥೆಗಳ ಜೊತೆಗೆ ಫೇಸ್ ಬುಕ್ ಈ ಕುರಿತಂತೆ ಒಪ್ಪಂದ ಕೂಡ ಮಾಡಿಕೊಂಡಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...