alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಫೇಸ್ ಬುಕ್ ಮುಖ್ಯಸ್ಥರಾಗಿ ಅಜಿತ್ ಮೋಹನ್

ಸಾಮಾಜಿಕ ತಾಣಗಳ ಬಹುದೊಡ್ಡ ಕಂಪನಿ ಫೇಸ್ ಬುಕ್, ಭಾರತದ ವ್ಯವಸ್ಥಾಪಕ ನಿರ್ದೇಶಕ ಮತ್ತು ಉಪಾಧ್ಯಕ್ಷರನ್ನಾಗಿ ಹಾಟ್ ಸ್ಟಾರ್ ಸಂಸ್ಥೆಯ ಸಿಇಒ ಆಗಿದ್ದ ಅಜಿತ್ ಮೋಹನ್ ರನ್ನು ನೇಮಕ ಮಾಡಿದೆ.

ಅಜಿತ್ ಮೋಹನ್ 2015 ರಲ್ಲಿ ದೇಶದ ಅತಿ ದೊಡ್ಡ ಸ್ಟ್ರಿಮಿಂಗ್ ಆ್ಯಪ್ ಹಾಟ್ ಸ್ಟಾರ್ ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಹಾಟ್ ಸ್ಟಾರ್ 2016 ರಲ್ಲಿ ಅಜಿತ್ ರನ್ನು ಸಿ.ಇ.ಒ ಆಗಿ ನೇಮಕ ಮಾಡಿತ್ತು. ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಅಜಿತ್, ಕಾರ್ಯವೈಖರಿಯನ್ನು ಪರಿಗಣಿಸಿ ಫೇಸ್ ಬುಕ್ ಅವರಿಗೆ ಮಣೆ ಹಾಕಿದೆ.

ಫೇಸ್ ಬುಕ್ ಸಂಸ್ಥೆ ಬಹು ದಿನಗಳಿಂದ ಈ ಹುದ್ದೆಗೆ ಸೂಕ್ತ ವ್ಯಕ್ತಿಯ ಹುಡುಕಾಟ ನಡೆಸಿತ್ತು. ಅಂತಿಮವಾಗಿ ಸಂಸ್ಥೆ ಅಜಿತ್ ರಿಗೆ ಈ ಜವಾಬ್ದಾರಿ ನೀಡಿ. ಭಾರತದಲ್ಲಿ ಫೇಸ್ ಬುಕ್ ಬೆಳವಣಿಗೆಗೆ ಪೂರಕವಾಗಿ ಅಜಿತ್ ರನ್ನು ನೇಮಕ ಮಾಡಿದ್ದು, ಸಮುದಾಯ, ವ್ಯವಹಾರ, ಸರ್ಕಾರದೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಲು ಅಜಿತ್ ರ ಅನುಭವ ಫೇಸ್ ಬುಕ್ ಕಂಪನಿಗೆ ಸಹಾಯವಾಗಲಿದೆ.

ಫೇಸ್ ಬುಕ್ ನೀಡಿರುವ ಹುದ್ದೆ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಫೇಸ್‍ಬುಕ್ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವ ಕನಸು ತಮ್ಮದಾಗಿದೆ ಎಂದು ಅಜಿತ್ ಮೋಹನ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...