alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ಮೆಸೆಂಜರ್ ನಲ್ಲಿ ಶುರುವಾಗಿದೆ ಹೊಸ ಫೀಚರ್

ಫೇಸ್ಬುಕ್, ಬಳಕೆದಾರರಿಗೊಂದು ಖುಷಿ ಸುದ್ದಿ ನೀಡಿದೆ. ಸಾಮಾಜಿಕ ಜಾಲತಾಣ ಕಂಪನಿ ಫೇಸ್ಬುಕ್ ತನ್ನ ಮೆಸೆಂಜರ್ ನಲ್ಲಿ ಹೊಸ ಫೀಚರ್ ಶುರು ಮಾಡಿದೆ. ಈ ಹೊಸ ಫೀಚರ್ ನಲ್ಲಿ ಬಳಕೆದಾರರು ವಾಯ್ಸ್ ಹಾಗೂ ವಿಡಿಯೋ ಮೂಲಕ ಒಂದಕ್ಕಿಂತ ಹೆಚ್ಚು ಜನರನ್ನು ಸಂಪರ್ಕಿಸಬಹುದಾಗಿದೆ.

ಕೆಲ ದಿನಗಳ ಹಿಂದಷ್ಟೇ ವಾಟ್ಸಾಪ್ ಗೆ ಈ ಫೀಚರ್ ಪರಿಚಯಿಸಲಾಗಿತ್ತು. ಈ ಹೊಸ ವೈಶಿಷ್ಟ್ಯ ಆಂಡ್ರಾಯ್ಡ್ ಹಾಗೂ ಐಒಎಸ್ ನಲ್ಲಿ ಸಿಗಲಿದೆ. ನಾವೊಂದು ಹೊಸ ಫೀಚರ್ ಶುರು ಮಾಡ್ತಿದ್ದೇವೆ. ಇದೊಂದು ಚಿಕ್ಕ ಫೀಚರ್. ಆದ್ರೆ ಆಡಿಯೋ, ವಿಡಿಯೋ ಕಾಲಿಂಗ್ ಜನರಿಗೆ ಇದು ವಿಶೇಷವಾಗಿರಲಿದೆ. ಫೇಸ್ಬುಕ್ ಬಳಕೆದಾರರು ಮೆಸೆಂಜರ್ ನಲ್ಲಿ ಬೇಗ ಚಾಟ್ ಮಾಡಲು ಈ ಫೀಚರ್ ಸಹಾಯ ಮಾಡಲಿದೆ ಎಂದು ಫೇಸ್ಬುಕ್ ಹೇಳಿದೆ.

ಒಬ್ಬರ ಜೊತೆ ಆಡಿಯೋ ಅಥವಾ ವಿಡಿಯೋ ಕಾಲಿಂಗ್ ಮಾಡುತ್ತಿರುವಾಗಲೇ ನೀವು ಇನ್ನೊಬ್ಬ ಬಳಕೆದಾರನನ್ನು ಈ ಚಾಟ್ ನಲ್ಲಿ ಸೇರಿಸಿಕೊಳ್ಳಬಹುದು. ಚಾಟ್ ಸಮಯದಲ್ಲಿ ಆ್ಯಡ್ ಪರ್ಸನ್ ಮೇಲೆ ಕ್ಲಿಕ್ ಮಾಡಿ ನೀವು ಈ ಸೇವೆ ಪಡೆಯಬಹುದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...