alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ಲೈವ್ ಸ್ಟೀಮರ್ಸ್ ಗೆ ಕೊಡಬಹುದು ‘ಟಿಪ್ಸ್’…!

ಲೈವ್ ಸ್ಟ್ರೀಮರ್ಸ್ ಗೆ ಫೇಸ್ಬುಕ್ ಹೊಸ ವರ್ಷದ ಗಿಫ್ಟ್ ಕೊಡ್ತಿದೆ. ವಿಡಿಯೋ ಗೇಮ್ ಪ್ಲೇ ಸ್ಟ್ರೀಮರ್ಸ್ ಗೆ ಬಳಕೆದಾರರು ತಮ್ಮ ಡೆಸ್ಕ್ ಟಾಪ್ ಸೈಟ್ ಮೂಲಕ ಕನಿಷ್ಟ 3 ಡಾಲರ್ ಟಿಪ್ಸ್ ನೀಡಲು ಹೊಸ ಆಪ್ಷನ್ ಪರಿಚಯಿಸಲು ಫೇಸ್ಬುಕ್ ಮುಂದಾಗಿದೆ.

ವಿವಿಧ ಈವೆಂಟ್ ಗಳ ಬಗ್ಗೆ ಲೈವ್ ಸ್ಟ್ರೀಮರ್ ಗಳು ಮಾಹಿತಿ ನೀಡ್ತಾರೆ, ಅಪ್ ಡೇಟ್ ಮಾಡ್ತಾರೆ. ಅದಕ್ಕೆ ಪ್ರತಿಯಾಗಿ ಅವರಿಗೆ ಹಣ ಅಥವಾ ಇತರ ಯಾವ ಸೌಲಭ್ಯವೂ ದೊರೆಯುವುದಿಲ್ಲ. ಹಾಗಾಗಿ ಅವರ ಪ್ರಯತ್ನ ವ್ಯರ್ಥವಾಗಬಾರದು ಅನ್ನೋ ಕಾರಣಕ್ಕೆ ಫೇಸ್ಬುಕ್ ಈ ಹೊಸ ಆಪ್ಷನ್ ಅಳವಡಿಸುತ್ತಿದೆ.

ಬಳಕೆದಾರರು ತಾವು ಇಷ್ಟಪಟ್ಟಷ್ಟು ಮೊತ್ತವನ್ನು ಲೈವ್ ಸ್ಟ್ರೀಮರ್ಸ್ ಗೆ ನೀಡಬಹುದು. ಅದನ್ನು ಫ್ಯಾನ್ ಸಪೋರ್ಟ್ ಅಂತಾ ಕರೆಯಲಾಗುತ್ತದೆ. ಅದರಲ್ಲಿ ಅಲ್ಪಭಾಗವನ್ನು ಫೇಸ್ಬುಕ್ ಪಡೆಯಲಿದೆ. ಯುಟ್ಯೂಬ್ ನಿಂದ ಗೇಮ್ ಸ್ಟ್ರೀಮರ್ ಗಳನ್ನು ಸೆಳೆದುಕೊಳ್ಳಲು ಫೇಸ್ಬುಕ್ ಈ ಪ್ಲಾನ್ ಮಾಡಿದೆ ಅಂತಾ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...