alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ನಲ್ಲಿ 27 ಕೋಟಿ ನಕಲಿ ಅಕೌಂಟ್..!

ಫೇಸ್ಬುಕ್ ನಲ್ಲಿ ಒಂದೇ ಹೆಸರಿನ ಎರಡೆರಡು ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಯಾವುದು ನಕಲಿ, ಯಾವುದು ಅಸಲಿ ಎನ್ನೋದೆ ಗೊತ್ತಾಗಲ್ಲ ಎನ್ನುವವರಿದ್ದಾರೆ. ಮತ್ತೆ ಕೆಲವರ ನಕಲಿ ಅಕೌಂಟ್ ನಲ್ಲಿ ಅಶ್ಲೀಲ ಸಂದೇಶಗಳು ರವಾನೆಯಾಗುವುದುಂಟು. ಫೇಸ್ಬುಕ್ ನಲ್ಲಿ ನಕಲಿ ಖಾತೆಗಳ ಹಾವಳಿ ಜಾಸ್ತಿಯಾಗಿದೆ. ಇದನ್ನು ಈಗ ಫೇಸ್ಬುಕ್ ಕೂಡ ಒಪ್ಪಿಕೊಂಡಿದೆ.  27 ಕೋಟಿಗೂ ಹೆಚ್ಚು ಖಾತೆಗಳು ನಕಲಿ ಎಂದು ಫೇಸ್ಬುಕ್ ಹೇಳಿದೆ.

ದಿ ಟೆಲಿಗ್ರಾಫ್ ವರದಿ ಪ್ರಕಾರ, ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್ಬುಕ್ ಶನಿವಾರ ತ್ರೈಮಾಸಿಕ ಗಳಿಕೆ ವರದಿಯನ್ನು ಬಿಡುಗಡೆ ಮಾಡಿದೆ. ಈ ವೇಳೆ ನಕಲಿ ಖಾತೆ ಬಗ್ಗೆಯೂ ಸ್ಪಷ್ಟನೆ ನೀಡಿದೆ. ಅದ್ರ ನಿರೀಕ್ಷೆಗಿಂತ ಹತ್ತು ಲಕ್ಷ ಪಟ್ಟು ನಕಲಿ ಖಾತೆಗಳು ಫೇಸ್ಬುಕ್ ನಲ್ಲಿವೆ ಎಂದು ಫೇಸ್ಬುಕ್ ಹೇಳಿದೆ.

ಕೆಲ ದಿನಗಳ ಹಿಂದೆ ರಾಜಕೀಯ ಜಾಹೀರಾತುಗಳನ್ನು ಪಾರದರ್ಶಕ ಮಾಡುವ ಭರವಸೆಯನ್ನು ಫೇಸ್ಬುಕ್ ನೀಡಿತ್ತು. ಜಾಹೀರಾತುದಾರರು ಗುರುತಿನ ಜೊತೆ ಇತರ ಮಾಹಿತಿಯನ್ನು ನೀಡಲು ಅನುಮತಿ ನೀಡಿತ್ತು. ಚುನಾವಣೆಗೆ ಸಂಬಂಧಿಸಿದ ಜಾಹೀರಾತು ನೀಡುವುದಾದಲ್ಲಿ ಗುರುತು, ದಾಖಲೆ ಅನಿವಾರ್ಯವೆಂದು ಫೇಸ್ಬುಕ್ ಹೇಳಿತ್ತು. ಈ ಬಗ್ಗೆ ಮತ್ತೊಮ್ಮೆ ಫೇಸ್ಬುಕ್ ಸ್ಪಷ್ಟನೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...