alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ದಿನ ಕರಗಿ ಹೋಯ್ತು ಫೇಸ್ ಬುಕ್ ನ 8 ಲಕ್ಷ ಕೋಟಿ ಸಂಪತ್ತು

ಸಾಮಾಜಿಕ ಜಾಲತಾಣ ದೈತ್ಯ ಸಂಸ್ಥೆ ಫೇಸ್ ಬುಕ್ ನ ಷೇರುಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ಇದರಿಂದಾಗಿ ಒಂದೇ ದಿನದಲ್ಲಿ ಸಂಸ್ಥೆಯ ಸುಮಾರು ಎಂಟು ಲಕ್ಷ ಕೋಟಿಯಷ್ಟು ಸಂಪತ್ತು ಕರಗಿದೆ.

ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರ ಸಂಪತ್ತಿನ ಮೇಲೂ ಇದು ಪರಿಣಾಮ ಬೀರಿದ್ದು, ಅವರ ಸಂಪತ್ತಿನಲ್ಲಿ ಸುಮಾರು 1 ಲಕ್ಷ ಕೋಟಿಯಷ್ಟು ಇಳಿಕೆಯಾಗಿದೆ.

ಬಳಕೆದಾರರ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಹೊತ್ತಿರುವ ಫೇಸ್ ಬುಕ್ ಷೇರುಗಳ ಬೆಲೆಯಲ್ಲಿ ಈಗ ಶೇಕಡಾ 19 ರಷ್ಟು ಇಳಿಕೆಯಾಗಿದೆ. ಯುರೋಪಿನಲ್ಲಿ ಜಾರಿಗೆ ಬಂದಿರುವ ಬಳಕೆದಾರರ ಖಾಸಗಿತನ ರಕ್ಷಿಸುವ ಹೊಸ ನೀತಿಯಿಂದ ಫೇಸ್ ಬುಕ್ ಜಾಹೀರಾತು ವಹಿವಾಟಿನ ಮೇಲೆ ಪರಿಣಾಮ ಬೀರಿದ್ದು, ಇದರಿಂದಾಗಿ ಷೇರು ಬೆಲೆ ಕುಸಿತವಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...