alex Certify
ಕನ್ನಡ ದುನಿಯಾ       Mobile App
       

Kannada Duniya

ಮಾತುಕತೆಗೊಂದೇ ಅಲ್ಲ ಗಳಿಕೆಗೂ ನೆರವಾಗಲಿದೆ ಫೇಸ್ಬುಕ್

ಸಾಮಾಜಿಕ ಜಾಲತಾಣ ಫೇಸ್ಬುಕ್ ಸಂಬಂಧಿಕರು, ಸ್ನೇಹಿತರನ್ನು ಹತ್ತಿರಕ್ಕೆ ಸೆಳೆದಿದೆ. ಅನೇಕ ಅಪರಿಚಿತರು ಪರಿಚಿತರಾಗಿದ್ದಾರೆ. ದಿನಕ್ಕೊಮ್ಮೆಯಾದ್ರೂ ಫೇಸ್ಬುಕ್ ನೋಡದ ವ್ಯಕ್ತಿಗಳಿಲ್ಲ. ಈ ಫೇಸ್ಬುಕ್ ಚಾಟ್, ಫೋಟೋ, ವಿಡಿಯೋ ವೀಕ್ಷಣೆಗೊಂದೇ ಅಲ್ಲ ಗಳಿಕೆಗೂ ಅವಕಾಶ ನೀಡ್ತಿದೆ.

ಫೇಸ್ಬುಕ್ ಮೂಲಕ ನೀವು ಸಾವಿರಾರು ರೂಪಾಯಿ ಸಂಪಾದನೆ ಮಾಡಬಹುದಾಗಿದೆ. ಫೇಸ್ಬುಕ್ ಅಡ್ವಾನ್ಸ್ ಯೂಸರ್ ಫೀಚರ್ ಹೊಂದಿದೆ. ಇದ್ರ ಸಹಾಯದಿಂದ ನೀವು ಹಣ ಗಳಿಕೆ ಮಾಡಬಹುದು. ಮೊದಲು ನೀವು ಫೇಸ್ಬುಕ್ ನಲ್ಲಿ ಪೇಜ್ ಒಂದನ್ನು ರಚಿಸಬೇಕು. ಅದನ್ನು ನಿರಂತರವಾಗಿ ಅಪ್ಡೇಟ್ ಮಾಡುತ್ತಿರಬೇಕು.ಇದ್ರಿಂದ ನಿಮ್ಮ ಪುಟದ ವ್ಯಾಪ್ತಿ ಹೆಚ್ಚುತ್ತದೆ.

ನಿಮ್ಮ ಪುಟವನ್ನು ನೋಡುವವರ ಸಂಖ್ಯೆ ಹೆಚ್ಚಾದಂತೆ ಹಾಗೂ ಲೈಕ್ಸ್ ಹೆಚ್ಚಿಗೆ ಬರ್ತಾ ಹೋದಂತೆ ಫೇಸ್ಬುಕ್ ನಿಮ್ಮ ಪೇಜನ್ನು ಸ್ಕ್ಯಾನ್ ಮಾಡುತ್ತದೆ. ಇದ್ರಿಂದ ಗಳಿಕೆ ಹೆಚ್ಚಾಗುತ್ತ ಹೋಗುತ್ತದೆ. ನಿಮ್ಮ ಫೇಸ್ಬುಕ್ ಅಕೌಂಟ್ ಗೆ ಉತ್ತಮ ರೆಸ್ಪಾನ್ಸ್ ಸಿಗ್ತಿದ್ದರೆ ಖುದ್ದು ಫೇಸ್ಬುಕ್ ಅಡ್ವಾನ್ಸ್ ಯೂಸರ್ ಅಕೌಂಟ್ ರಚಿಸುವಂತೆ ಜಾಹೀರಾತು ಕಳಿಸುತ್ತದೆ.

ಫೇಸ್ಬುಕ್ ಪೇಜ್ ನೋಡುವವರ ಸಂಖ್ಯೆ ಹೆಚ್ಚಾಗ್ತಿದ್ದಂತೆ ನೀವು ಫೇಸ್ಬುಕ್ ಗೆ ಮನವಿಯೊಂದನ್ನು ಕಳುಹಿಸಬೇಕು. ಅದು ಸ್ವೀಕಾರವಾದ್ರೆ ನಿಮ್ಮ ಪೇಜ್ ನಲ್ಲಿ ಜಾಹೀರಾತುಗಳು ಕಾಣಲಿವೆ. ಇದ್ರಿಂದ ನಿಮ್ಮ ಗಳಿಕೆ ಹೆಚ್ಚಾಗಲಿದೆ. ಫೇಸ್ಬುಕ್ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಸೇರಿದಂತೆ ಕೆಲ ಮಾಹಿತಿಗಳನ್ನು ಕೇಳಲಿದೆ. ಅದನ್ನು ನೀವು ಫೇಸ್ಬುಕ್ ಗೆ ನೀಡಿದ ನಂತ್ರ ನಿಮ್ಮ ಗಳಿಕೆ ಹಣ ನೇರವಾಗಿ ನಿಮ್ಮ ಅಕೌಂಟ್ ಸೇರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...