alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ಬಳಕೆದಾರರಿಗೊಂದು ಗುಡ್ ನ್ಯೂಸ್

ಮೊಬೈಲ್ ನಲ್ಲಿಯೇ ಡೇಟಿಂಗ್ ಮಾಡೋದಕ್ಕೆ ಅವಕಾಶವಿದ್ರೇ ಎಷ್ಟು ಒಳ್ಳೇದಲ್ವಾ ಅಂದ್ಕೊಳ್ಳೋರು ಎಷ್ಟೋ ಜನರಿದ್ದಾರೆ. ಆದ್ರೀಗ ಅದನ್ನ ನನಸು ಮಾಡ್ತಿದೆ ಸಾಮಾಜಿಕ ಜಾಲತಾಣದ ದೈತ್ಯ ಫೇಸ್ ಬುಕ್. ಇದು ಅಚ್ಚರಿ ಅನ್ನಿಸಿದ್ರೂ ನಿಜ. ಡೇಟಿಂಗ್ ಮಾಡೋರಿಗೀಗ ಎಫ್ ಬಿ ಒಂದು ಹೊಸ ಆ್ಯಪ್ ಪರಿಚಯಿಸುತ್ತಿದೆ.

ಕೊಲಂಬಿಯಾದಲ್ಲಿ ಗುರುವಾರ ಡೇಟಿಂಗ್ ಆ್ಯಪ್ ಪ್ರಾಯೋಗಿಕವಾಗಿ ಫೇಸ್ ಬುಕ್ ಶುರು ಮಾಡಿದೆ. ಈಗಾಗಲೇ ಹಿಂಜ್ ಇಂಥ ಒಂದು ಆ್ಯಪ್ ಹೊಂದಿದ್ದು, ಅದಕ್ಕೆ ಎಫ್ ಬಿ ಟಕ್ಕರ್ ನೀಡಲಿದೆ. ಬಳಕೆದಾರರ ಪ್ರೊಫೈಲ್ ನಲ್ಲಿ ಏನಾದರೂ ಪ್ರಶ್ನೆ ಕೇಳಲು ಮತ್ತು ಅದಕ್ಕೆ ಸಮರ್ಥ ಉತ್ತರವನ್ನೂ ಪಡೆಯಲು, ಜತೆಗೆ ಸಂಭಾಷಣೆ ನಡೆಸಲು ಇಲ್ಲಿ ವೇದಿಕೆ ಇದೆ. ಅದೇ ರೀತಿ ಪ್ರೊಫೈಲ್ ನಲ್ಲಿ ಡೇಟಿಂಗ್ ನಡೆಸೋರಿಗೆ ಎಫ್ ಬಿ ಕೂಡ  ಕೊಂಡಿಯಾಗಲಿದೆ. ಇದರಲ್ಲಿ ಜನ ಹೆಚ್ಚು ಸರಳ- ಆರಾಮದಾಯಕವಾಗಿ ಆ್ಯಪ್ ನಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಉದ್ದೇಶ ಸಂಸ್ಥೆಯದ್ದಾಗಿದೆ.

ಈ ರೀತಿಯ ಡೇಟಿಂಗ್ ಮಾಡಲು ಸದ್ಯ ಮೊಬೈಲ್ ಆ್ಯಪ್ ನಲ್ಲಷ್ಟೇ ಲಭ್ಯ. ಇದಿನ್ನೂ ಡೆಸ್ಕ್ ಟಾಪ್ ಕಂಪ್ಯೂಟರ್ ಹೊಂದಿರೋಗೆ ಲಭ್ಯವಿಲ್ಲ. 18 ವರ್ಷ ಮೇಲ್ಪಟ್ಟ ವಯಸ್ಕರರು ಮಾತ್ರ ಇದನ್ನ ಬಳಸಲು ಸಾಧ್ಯವಿದೆ. ಸಂಪೂರ್ಣ ಉಚಿತ ಜತೆಗೆ ಯಾವುದೇ ಜಾಹೀರಾತು ಅಥವಾ ಪ್ರೀಮಿಯಂ ವೈಶಿಷ್ಟ್ಯಗಳನ್ನ ಹೊಂದಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ  ಫೇಸ್ ಬುಕ್ ದೈತ್ಯಶಕ್ತಿ. ಗುಂಪು ಚರ್ಚೆ, ಇವೆಂಟ್ ಗಳಿಗೆ ಕೊಂಡಿಯಂತಿರೋ ಎಫ್ ಬಿ ಈಗ ಇನ್ನೊಂದು ಹೆಜ್ಜೆ ಮುಂದೆ ಇರಿಸಿ,  ಡೇಟಿಂಗ್ ಆ್ಯಪ್ ತಂದಿರೋದ್ರಿಂದ ಬಳಕೆದಾರರು ಸಾರ್ವಜನಿಕವಾಗಿ ಪರಸ್ಪರ ಸೇರಲು ಈ ಆ್ಯಪ್ ಸೇತುವೆಯಾಗಲಿದೆ.

ಮ್ಯಾಚ್ ಗ್ರುಪ್ ಮೊಬೈಲ್ ಡೇಟಿಂಗ್ ಆ್ಯಪ್ ಹಾಗೂ ಟಿಂಡರ್ ಮತ್ತು ಪಾಪ್ಯುಲರ್ ಡೇಟಿಂಗ್ ಆ್ಯಪ್ ಗಳಿಗೆ ಫೇಸ್ ಬುಕ್ ಡೇಟಿಂಗ್ ಆ್ಯಪ್ ತೀವ್ರ ಸ್ಪರ್ಧೆಯೊಡ್ಡಲಿದೆ ಅಂತ ಹೇಳಲಾಗ್ತಿದೆ. ಇದರಿಂದ ಎಫ್ ಬಿ ಬಳಕೆದಾರರ ಸಂಖ್ಯೆ ಡಬಲಾದ್ರೂ ಅಚ್ಚರಿಪಡ್ಬೇಕಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...